Breaking News

ಟಿವಿ ಚಾನೆಲ್‌ಗಳಿಗೆ ಆಘಾತ ನೀಡಿದ ಕಾಂಗ್ರೆಸ್ ಸರ್ಕಾರ

ಬೆಂಗಳೂರು: ಕನ್ನಡ ನ್ಯೂಸ್ ಚಾನೆಲ್‌ಗಳ ಸಂಖ್ಯೆ ಈಗ ನೂರಕ್ಕೆ ತಲುಪಲು ಸಜ್ಜಾಗಿದ್ದು, ಎಲ್ಲೆಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಿದ್ದಾಗ ಬಹುತೇಕ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ವಿರುದ್ಧ ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್ತಿವೆ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದು.
ಈ ಬೆಳವಣಿಗೆ ನಡುವೆ ಕರ್ನಾಟಕ ಕಾಂಗ್ರೆಸ್ ನಾಯಕರು ಟಿವಿ ಚಾನೆಲ್‌ಗಳಿಗೆ ಆಘಾತ ನೀಡಲು ಸಜ್ಜಾಗಿದ್ದು, ಟಿವಿ ಚಾನೆಲ್‌ಗಳ ವಿರುದ್ಧ ಹೊಸ ಬ್ರಹ್ಮಾಸ್ತ್ರ ಸಿದ್ಧಪಡಿಸಿದ್ದಾರೆ. ಅಂದಹಾಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಪೂರೈಸಿದ್ದು ಇದೀಗ 2ನೇ ವರ್ಷ ಪೂರೈಸುವತ್ತ ಮುನ್ನಡೆದಿದೆ. ಹೀಗಿದ್ದಾಗಲೇ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಾಲು ಸಾಲು ಗಂಭೀರ ಆರೋಪಗಳನ್ನ ಮಾಡುತ್ತಿದ್ದಾರೆ. ಅದರಲ್ಲೂ ಮುಡಾಸೈಟ್ ಹಗರಣ ಮುಂದೆ ಇಟ್ಟುಕೊಂಡು ವಿರೋಧ ಪಕ್ಷಗಳ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪ್ರಮುಖರ ವಿರುದ್ಧವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಸಂಘಟಿಸಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಮಾಧ್ಯಮಗಳು ಕೂಡ ಮುಖ್ಯವಾಗಿ ಕನ್ನಡ ನಾಡಿನ ಟಿವಿ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ, ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್ತಿವೆ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದು.
ಬಹುತೇಕ ಕನ್ನಡದ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ವಿರೋಧಿ ಸುದ್ದಿ ಪ್ರಕಟ ಮಾಡುತ್ತಿವೆ ಎಂಬುದು ಕಾಂಗ್ರೆಸ್ ಆರೋಪ. ಹೀಗಾಗಿ ಹೊಸ ಪ್ಲಾನ್ ಮಾಡಿದೆ ಕರ್ನಾಟಕ ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್ ಈಗ ಮಾಡಿಕೊಂಡ ಪ್ಲಾನ್ ಪ್ರಕಾರ, ಶೀಘ್ರದಲ್ಲೇ ಕಾಂಗ್ರೆಸ್ ನೇತೃತ್ವದಲ್ಲಿ ಹೊಸ ನ್ಯೂಸ್ ಚಾನೆಲ್ ಕನ್ನಡದಲ್ಲಿ ಆರಂಭ ಮಾಡಲು ಚಿಂತನೆ ನಡೆದಿದೆ.
ಹಾಗೇ ಇಂಗ್ಲಿಷ್ ಭಾಷೆಯಲ್ಲೂ ಚಾನೆಲ್ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ, ಮತ್ತೊಂದು ಕಡೆ ನ್ಯೂಸ್ ಪೇಪರ್ ಒಂದನ್ನು ಕರ್ನಾಟಕ ಕಾಂಗ್ರೆಸ್ ವತಿಯಿಂದ ಆರಂಭ ಮಾಡೋದಕ್ಕೆ ಚರ್ಚೆಗಳು ನಡೆದಿವೆಯಂತೆ. ಹೀಗೆ ಕರ್ನಾಟಕ ಕಾಂಗ್ರೆಸ್ ವತಿಯಿಂದ ಸ್ವಂತ ನ್ಯೂಸ್ ಚಾನೆಲ್ ಅಥವಾ ಮಾಧ್ಯಮ ಸಂಸ್ಥೆ ಆರಂಭ ಮಾಡುವ ಬಗ್ಗೆ ನಡೆದಿರುವ ಚಿಂತನೆ ಕುರಿತು ಇದೀಗ, ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *