ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 54ನೇ ಸಭೆ ಸೋಮವಾರ ನಡೆಯಲಿದೆ.
ಈ ಸಭೆಯು ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡಿರಲಿದೆ. ವಿಮಾ ಕಂತುಗಳ ಮೇಲಿನ ತೆರಿಗೆ, ಜಿಎಸ್‌ಟಿ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಸಲಹೆಗಳ ಬಗ್ಗೆ ಮತ್ತು ಆನ್‌ಲೈನ್ ಗೇಮಿಂಗ್ ಕುರಿತ ವಾಸ್ತವಿಕ ವರದಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ನಿರೀಕ್ಷೆ ಇದೆ, ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳನ್ನು ಒಳಗೊಂಡ (ಫಿಟ್‌ಮೆಂಟ್) ಸಮಿತಿಯು ಸಭೆಯಲ್ಲಿ, ಜೀವ ಮತ್ತು ಆರೋಗ್ಯ ವಿಮೆಯ ಕಂತುಗಳ ಮೇಲೆ ಮತ್ತು ಮರುವಿಮೆಯ ಮೇಲೆ ವಿಧಿಸಲಾಗಿರುವ ಜಿಎಸ್‌ಟಿ ಮತ್ತು ಅದರ ಹಣಕಾಸಿನ ಪರಿಣಾಮಗಳ ಬಗ್ಗೆ ವರದಿ ಪ್ರಸ್ತುತಪಡಿಸಲಿದೆ ಎಂದೂ ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

