ಕಾಸರಗೋಡು: ವಿದ್ಯುತ್ ಇಲಾಖೆಯ ಸಿಬ್ಬಂದಿ ಸೋಗಿನಲ್ಲಿ ಮನೆಗೆ ಬಂದ ಯುವಕನೊಬ್ಬ ಗೃಹಿಣಿಯ ಕುತ್ತಿಗೆಯಲ್ಲಿದ್ದ ಐದು ಪವನ್ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಮಂಗಳವಾರ ಸಂಜೆ ಕೊಳತ್ತೂರಿನಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಶುಭಾ ಅವರ ಮನೆಗೆ ಬಂದ ಯುವಕ, ವಿದ್ಯುತ್ ತಂತಿ ಪರಿಶೀಲಿಸುವ ನೆಪದಲ್ಲಿ ಕೊಳವೆ ಬಾವಿ ಸಮೀಪಕ್ಕೆ ತೆರಳಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಶುಭಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ. ಜಗ್ಗಾಟದ ವೇಳೆ ನಾಲ್ಕು ಪವನ್ ಚಿನ್ನ ಆರೋಪಿಯ ಕೈಗೆ ಸಿಕ್ಕಿದ್ದು, ಒಂದು ಪವನ್ ಶುಭಾ ಅವರ ಕೈಯಲ್ಲೇ ಉಳಿದಿದೆ. ಗಲಾಟೆ ಕೇಳಿ ಸ್ಥಳೀಯರು ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದು, ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

