ರಾಮನಗರ: 20 ವರ್ಷದ ಬಳಿಕ ನಿರ್ಮಾಣಕ್ಕೆ ಸಜ್ಜಾಗಿರುವ ಸ್ಯಾಟಲೈಟ್ ಸಿಟಿ ರಿಂಗ್ ರೋಡ್(ಎಸ್ ಟಿಆರ್‌ಆರ್) ಜಿಲ್ಲೆಯಲ್ಲಿ ಸುಮಾರು 70 ಕಿಮೀ ದೂರು ಹಾಯ್ದು ಹೋಗಲಿದೆ. ಇದರಿಂದಾಗಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಸಂಪರ್ಕ ಮತ್ತಷ್ಟು ಸುಗಮ ಗೊಳ್ಳಲಿದೆ.
ಹೌದು, ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ಸ್ಯಾಟ್ ಲೈಟ್ ರಿಂಗ್ ರಸ್ತೆ 144 ಕಿಮೀ ನಿರ್ಮಾಣಕ್ಕೆ 4750 ಕೋಟಿ ರೂ.ಅಂದಾಜು ವೆಚ್ಚದಲ್ಲಿ 5 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆದಿದೆ.
ಇದರಲ್ಲಿ ಮೂರು ಪ್ಯಾಕೇಜ್‌ಗಳು ರಾಮನಗರ ಜಿಲ್ಲೆಯಲ್ಲಿ ಹಾಯ್ದು ಹೋಗಲಿದ್ದು, ಮಾಗಡಿಯಿಂದ ರಾಮನಗರ ಮೂಲಕ ಕನಕಪುರ ತಾಲೂಕಿನವರೆಗೆ ಸುಮಾರು 70 ಕಿಮೀ ದೂರ ರಾಮನಗರ ಜಿಲ್ಲೆಯಲ್ಲಿ ಎಸ್‌ಟಿಆರ್‌ಆರ್ ರಸ್ತೆ ಎನ್ ಎಚ್ 948 ಎ ಹಾಯ್ದು ಹೋಗಲಿದೆ.
ಜಿಲ್ಲೆಯಲ್ಲಿ ಹಾಯ್ದು ಹೋಗಲಿರುವ ಎಸ್‌ಟಿಆರ್‌ಆರ್ ರಾಮನಗರ ಜಿಲ್ಲೆಯ ಜನತೆಗೆ ಮಾತ್ರವಲ್ಲದೇ ಮಂಡ್ಯ, ಮೈಸೂರು, ಮಡಿಕೇರಿ ಭಾಗದಿಂದ ಬರುವ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು, ಕೋಲಾರ, ಚಿಕ್ಕಬಳ್ಳಾಪುರ ಕಡೆಗೆ ಹೋಗಲು ಹಾಗೂ ಹೊಸೂರು ರಸ್ತೆ ಸಂಪರ್ಕಿಸಲು ಬೆಂಗಳೂರು ನಗರ ಪ್ರವೇಶಿಸುವುದು ತಪ್ಪಲಿದೆ. ಇದರಿಂದಾಗಿ ಪ್ರಯಾಣಿಕರು ಅನವಶ್ಯಕವಾಗಿ ಬೆಂಗಳೂರು ನಗರದ ಸಂಚಾರ ಕಿರಿಕಿರಿ ಅನುಭವಿಸುವುದನ್ನು ತಪ್ಪಿಸಲಿದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

