Breaking News

ಪುನೀತ್ ಪುಣ್ಯ ಸ್ಮರಣೆ ಹಿನ್ನೆಲೆ: ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಇಷ್ಟದ ಸಾವಜಿ ಖಾನಾವಳಿ ಊಟ ಅರ್ಪಿಸಿ ಕಣ್ಣೀರು ಹಾಕಿದ ಅಭಿಮಾನಿ

ಹುಬ್ಬಳ್ಳಿ : ನಟ, ದಿವಂಗತ ಪುನೀತ್ ರಾಜ್‌ಕುಮಾರ್‌ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಹುಬ್ಬಳ್ಳಿಯ ಪುನೀತ್ ಅಭಿಮಾನಿಗಳು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ನಗರದ ಚೆನ್ನಮ್ಮ ವೃತ್ತದಲ್ಲಿ ಪುನೀತ್ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಬ್ಲಾಕ್ ಡೇ ಎಂದು ಆಚರಿಸಿದ ಅಭಿಮಾನಿ ರಘು ವದ್ದಿ ಹಾಗೂ ಗೆಳೆಯರು ಕಪ್ಪು ಶರ್ಟ್ ಹಾಕಿ ಬ್ಲಾಕ್ ಡೇ ಎಂದು ಬರೆದು ಅಪ್ಪುಗೆ ಗೌರವ ನಮನ ಸಲ್ಲಿಸಿದರು.

ಅಪ್ಪು ಭಾವಚಿತ್ರದ ಮುಂದೆ ಅವರಿಷ್ಟದ ಸಾವಜಿ ಊಟ ಇಟ್ಟು ಪೂಜೆ ಸಲ್ಲಿಸಿದರು. ಪುನೀತ್ ರಾಜ‌ಕುಮಾರ್ ಗೆ ಇಷ್ಟವಾದ ಸಾವಜಿ ಊಟ ಇಟ್ಟು ಪುಣ್ಮ ಸ್ಮರಣೆ ಮಾಡಿದರು. ಚಿಕನ್,ಚಿಕನ್ ಕಬಾಬ್,ಮಟನ್ ಕೈಮಾ,ಖಡಕ್ ರೊಟ್ಟಿ,ಸ್ವೀಟ್ ಸೇರಿದಂತೆ ಇತರೆ ಖಾದ್ಯಗಳನ್ನು ಅಪ್ಪು ಕಟೌಟ್ ಮುಂದೆ ಇಟ್ಟು ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಪುನೀತ್ ಅಭಿಮಾನಿ ರಘು ವದ್ದಿ
ಕಣ್ಣೀರಿಟ್ಟು ಬಿಕ್ಕಿ ಬಿಕ್ಕಿ ಅತ್ತರು. ನಮ್ಮ ದೇವರು ಹೊರಟು ಹೋಗಿದ್ದಾರೆ. ಅವ್ರು ಹೀರೊ ಅಲ್ಲ, ನಮ್ಮ ದೇವರು
ನಮ್ಮನ್ನು ದೇವರು ಅಗಲಿದ್ದಾರೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ನಂತರ ಹೂವಿನ ಗಿಡ ಹಸ್ತಾಂತರಿಸಿದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *