ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಬಂದಾಗ ದೇಶ ದ್ರೋಹ ಕೃತ್ಯಗಳು ಸರ್ವೇ ಸಾಮಾನ್ಯವಾಗಿದೆ. ಗಣಪತಿ ಪ್ರತಿಷ್ಠಾಪನೆ ಮಾಡಿದವರನ್ನು ಎ-1 ಆರೋಪಿ ಮಾಡಿದ್ದು, ಎಸ್.ಪಿ ಗೆ ಹಾಗೂ ಗೃಹ ಸಚಿವರಿಗೆ ನಾಚಿಕೆ ಮಾನ ಮರ್ಯಾದೆಯೇ ಇಲ್ಲವಾಗಿದ್ದು, ರಾಜ್ಯವನ್ನು ಪಾಕಿಸ್ತಾನ ಮಾಡಿದ್ದೀರಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೇಶದಲ್ಲಿ ಯುಪಿಎ ಕಾಲದಲ್ಲಿ ಯಾವ ರೀತಿ ಭ್ರಷ್ಟಾಚಾರ ಆಗಿತ್ತೋ ಅದೇ ರೀತಿ ಇಲ್ಲೂ ಸೀರಿಸ್ ಸ್ಕ್ಯಾಮ್ ನಡೆದಿವೆ. ಇದು ನಾಚಿಕೆ ಮಾನ ಮರ್ಯಾದೆ ಇರಲಾರದ ಸರ್ಕಾರ. ಗಣೇಶ ಕೂರಿಸಿದವರನ್ನು A1 ಆರೋಪಿ ಮಾಡಿದ್ದಾರೆ. ಅಲ್ಲಿನ SP ಗೆ ಮಾನ ಮರ್ಯಾದೆ ಇದೆಯಾ.? ಗೃಹ ಸಚಿವರಿಗೆ ಏನಾಗಿದೆ ಎಂದು ಜೋಶಿ ಕಿಡಿ ಕಾರಿದರು.
ನೀವೇನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ..? ಪಾಕಿಸ್ತಾನ ಮಾದರಿ ಆಡಳಿತ ನಡೆಸ್ತಿದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಕಾಲದಲ್ಲಿ ಇಂತಹ ದೇಶದ್ರೋಹ ಕೃತ್ಯಗಳು ನಡೆಯುವುದು ಸರ್ವೇ ಸಾಮಾನ್ಯವಾಗಿದೆ ಎಂದು ಜೋಶಿ ವಾಗ್ದಾಳಿ ನಡೆಸಿದ್ರು.
bigtvnews | Hubli Dharwad News | Kannada News | Karnataka News Hubli News | News In Hubli | Local news

