Breaking News

ನಾಭಿರಾಜ ಸಾವು ಪ್ರಕರಣ : 11 ಜನ ಬಂಧನ

ಹುಬ್ಬಳ್ಳಿ: ಪ್ರೈ ಓವರ್ ಮೇಲಿಂದ ಕಬ್ಬಣದ ಬಾರ್ ಬಿದ್ದು ಎ ಎಸ್‌ಐ ನಾಭಿರಾಜ ದಯಣ್ಣವರ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ಜನರನ್ನ ಹುಬ್ಬಳ್ಳಿ ಉಪನಗರ ಪೋಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹರ್ಷಾ ಹೊಸಗಾಣಿಗೇರ..ಜಿತೇಂದ್ರಪಾಲ..ಭೂಪೇಂದ್ರ,.ಮೊಹಮ್ಮದ ಸೇರಿದಂತೆ ಹನ್ನೊಂದು ಜನರನ್ನು ಬಂಧಿಸಿದ್ದಾರೆ ಇನ್ನೂ ಕೆಲವರನ್ನು ಬಂಧಿಸಬೇಕಿದೆ ಎಂದು ಉಪನಗರ ಪೋಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೈಓವರ್ ಕಾಮಗಾರಿಯನ್ನು ಮಾಡುತ್ತಿರುವ ಝಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾಕ್ರಮ ಕೈಕೊಳ್ಳದ ಹಿನ್ನೆಲೆಯಲ್ಲಿ ಹಾಗೂ ಅಲ್ಲಿಯ ನೌಕರರ ನಿರ್ಲಕ್ಷ್ಯವೇ ಎಎಸ್‌ಐ ಸಾವಿಗೆ ಕಾರಣ ಎಂದು ಕಂಪನಿಯ ಮೇಲೆ ದೂರು ದಾಖಲು ಮಾಡಿಕೊಂಡು ಹಲವರನ್ನ ಬಂಧಿಸಲಾಗಿದೆ.

Share News

About bigtvnews22

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *