ಬೆಂಗಳೂರಿನಲ್ಲಿ ಮದ್ಯದ ನಶೆಯಲ್ಲಿದ್ದ 26 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಸಮೀರ್ ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಯುವತಿ ಪ್ರವಾಸಕ್ಕಾಗಿ ನಗರಕ್ಕೆ ಬಂದಿದ್ದಳು. ಅ.23ರಂದು ಕೋರಮಂಗಲದ ಕ್ಲಬ್‌ನಲ್ಲಿ ಸಮೀರ್ ಪರಿಚಯವಾಗಿದ್ದು, ಬಳಿಕ ಇಬ್ಬರೂ ಸಂಪರ್ಕದಲ್ಲಿದ್ದರು. ಅ.28ರಂದು ಹೋಟೆಲ್‌ಗೆ ಕರೆದೊಯ್ದು ಮದ್ಯ ಸೇವಿಸಿದ ಬಳಿಕ ಯುವತಿ ನಶೆಯಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ತಡರಾತ್ರಿ ಎಚ್ಚರಗೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
