Breaking News

ಹುಣಸೂರಿನಲ್ಲಿ ಕುರಿ ಕಳ್ಳರಿಂದ ಗುಂಡಿನ ದಾಳಿ: ಮೂವರು ಕುರಿಗಾಹಿಗಳಿಗೆ ಗಾಯ

ಹುಣಸೂರು ತಾಲೂಕಿನ ಗುರುಪುರ ವ್ಯಾಪ್ತಿಯಲ್ಲಿ ಕುರಿ ಕಳ್ಳತನಕ್ಕೆ ಯತ್ನಿಸಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಮೂವರು ಕುರಿಗಾಹಿಗಳು ಗಾಯಗೊಂಡಿದ್ದಾರೆ. ತುಮಕೂರು ಮೂಲದ ಗೋವಿಂದಪ್ಪ, ಜುಂಜಣ್ಣ ಹಾಗೂ ಭೀಮ ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ ಬಾಳೆ ತೋಟದಲ್ಲಿ ಕುರಿಗಳನ್ನು ಮೇಯಲು ಬಿಡಲಾಗಿತ್ತು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಕಳ್ಳರು ಕುರಿಗಳನ್ನು ಕದಿಯಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಮುಂದಾದ ಕುರಿಗಾಹಿಗಳ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕುರಿಗಾಹಿಗಳ ಕೂಗಾಟ ಕೇಳಿ ಸ್ಥಳೀಯರು ಧಾವಿಸುತ್ತಿದ್ದಂತೆ ಕಳ್ಳರು ಒಂದು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬೈಕ್ ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ವಸತಿ ನಿಲಯದ ನಾಲ್ಕನೇ ಮಹಡಿಯಿಂದ ಬಿದ್ದು ನರ್ಸಿಂಗ್ ವಿದ್ಯಾರ್ಥಿ ಅನುಮಾನಾಸ್ಪದ ಮೃತ್ಯು

ಕಲಬುರಗಿ: ನಗರದ ರಾಜಾಪುರ ರಸ್ತೆಯ ಬಾಬು ಜಗಜೀವನ ರಾಮ್ ವಸತಿ ನಿಲಯದ ನಾಲ್ಕನೇ ಮಹಡಿಯಿಂದ ಬಿದ್ದು 25 ವರ್ಷದ ನರ್ಸಿಂಗ್ …

Leave a Reply

Your email address will not be published. Required fields are marked *