Breaking News

ಗ್ರಾಮದಲ್ಲಿನ ಜಾಗ ದುರುಪಯೋಗ : ಜಾಗ ಮರಳಿಸುವಂತೆ ಮನವಿ

ಕಲಘಟಗಿ: ತಾಲೂಕಿನ ಬೆಲವಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹನುಮಾಪುರ ಗ್ರಾಮದಲ್ಲಿನ ಕುಡಿಹೊಂಡ ಕೆರೆ ಜಾಗವನ್ನು ಗ್ರಾಮದ ಉಪಾಧ್ಯಕ್ಷೆ ಸಹನಾಜಬಿ ಉಗ್ಗಿನಕೇರಿ ಅವರು ತಮ್ಮ ಅಧಿಕಾರಾವಧಿಯಲ್ಲಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಉಪಾಧ್ಯಕ್ಷೆಯ ಪತಿ ಕಲಂದರ ಉಗ್ಗಿನಕೇರಿ ಎಂಬುವವರು, ಗ್ರಾಮದ ಕುಡಿಹೊಂಡ ಕೆರೆ ಜಾಗವನ್ನು ಗ್ರಾಮ ಪಂಚಾಯಿತಿ ರಿಜಿಸ್ಟ್ರಾ‌ರ್ ಬುಕ್‌ನಲ್ಲಿ, ಗಂಗವ್ವ ಭಾವನವರ ಎಂಬುವವರ ಹೆಸರಿನಲ್ಲಿ ಇ ಸ್ವತ್ತು ಉತ್ತಾರವನ್ನು ದಾಖಲಿಸಿದ್ದಾರೆ.

ನಂತರ ಆ ಜಾಗವನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದು ಅಧಿಕಾರ ದುರುಪಯೋಗ ಮಾಡಿಕೊಂಡು ಉಪನೋಂದಣಿ ಕಚೇರಿಯಲ್ಲಿ ಕೆರೆ ಜಾಗವನ್ನು ಖುಲ್ಲಾ ಜಾಗವೆಂದು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದರ ಬಗ್ಗೆ ಈಗಾಗಲೇ ಇಲ್ಲಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ತನಿಖೆ ನಡೆಸಿ ಉಪಾಧ್ಯಕ್ಷರ ಮೇಲೆ ಹಾಗೂ ಜಾಗವನ್ನು ತಮ್ಮ ಹೆಸರಿಗೆ ದಾಖಲು ಮಾಡಿಕೊಂಡವರ ಮೇಲೆ ಸೂಕ್ತ ಕ್ರಮ ಕೈಗೊಂಡು ಕೆರೆ ಜಾಗವನ್ನು ಗ್ರಾಮಕ್ಕೆ ಬಿಟ್ಟು ಕೊಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *