Breaking News

ತಿರುಪತಿ ಲಡ್ಡುಗೆ ಕೋಲಾರದಿಂದ ನಂದಿನಿ ತುಪ್ಪ ರವಾನೆ

ಕೋಲಾರ: ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ವಿಚಾರ ಸಂಬಂಧ ಮಾತನಾಡಿದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಅಧ್ಯಕ್ಷ್ಯ ಕೆ.ವೈ.ನಂಜೇಗೌಡ, ಇನ್ಮುಂದೆ ಕೆಎಂಎಫ್ ನಿಂದ ತುಪ್ಪ ರವಾನೆ ಮಾಡಲಾಗುತ್ತದೆ ಅಂತ ಹೇಳಿದ್ದಾರೆ.
ನಮ್ಮಲ್ಲಿಂದ ತುಪ್ಪ ರವಾನೆ ನಿಂತಾಗ ಲಡ್ಡು ಪ್ರಸಾದದ ರುಚಿ ಇಳಿಕೆಯಾಗಿತ್ತು. ಈಗ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಿಂದ ಭಕ್ತರ ಭವನೆಗೆ ಧಕ್ಕೆಯಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕೋಲಾರದಿಂದ ತುಪ್ಪ ರವಾನಿಸಲಾಗುತ್ತೆ ಅಂತ ಅವರು ಹೇಳಿದ್ದಾರೆ.
ಕೆಎಂಎಫ್ ನಿಂದ ತುಪ್ಪ ರವಾನೆ ನಿಂತಾಗ, ಲಡ್ಡು ಪ್ರಸಾದ ರುಚಿ ಇಳಿಕೆಯಾಗಿತ್ತು, ಈಗ ಲಡ್ಡು ಪ್ರಸಾದದಲ್ಲಿ ಕೊಬ್ಬು, ಎಣ್ಣೆ ಬಳಕೆಯಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಈಗಾಗಲೇ ಕೆಎಂಎಫ್ ನಿಂದ ನಂದಿನಿ ತುಪ್ಪ ರವಾನೆ ಆರಂಭವಾಗಿದೆ, ಲಡ್ಡು ರುಚಿ ಹೆಚ್ಚಾಗಿದೆ. ಕೆಎಂಎಫ್ ಜೊತೆಗೆ ಟಿಟಿಡಿ ಆಡಳಿತ ಮಂಡಳಿ ತುಪ್ಪ ರವಾನೆಗೆ ಒಪ್ಪಂದವಾಗಿದೆ, ತಿರುಪತಿಗೆ ಕೋಲಾರ ಜಿಲ್ಲೆ ಸಮೀಪದಲ್ಲಿರುವ ಕಾರಣ ಕೋಲಾರದಿಂದ ತುಪ್ಪ ರವಾನೆ ಮಾಡ್ತೇವೆ. ಕೋಲಾರದಿಂದ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ರವಾನೆಯಾಗಲಿದೆ ಎಂದು ಕೋಚಿಮುಲ್ ಕಚೇರಿಯಲ್ಲಿ ಅಧ್ಯಕ್ಷ್ಯ ಕೆವೈ ನಂಜೇಗೌಡ ಸ್ಪಷ್ಟಪಡಿಸಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯದ ದೇವಾಲಯಗಳಲ್ಲಿ ಪರಿಶುದ್ಧ ನಂದಿನಿ ತುಪ್ಪ ಬಳಕೆಗೆ ಸೂಚನೆ ನೀಡಿದೆ. ನಂದಿನಿ ತುಪ್ಪ ಬಳಸಿ ಪ್ರಸಾದ ತಯಾರಿಕೆ ಮಾಡಬೇಕು ಎಂದು ಆದೇಶ ನೀಡಲಾಗಿದೆ. ದಾಸೋಹ ಭವನಗಳಲ್ಲಿಯೂ ಕಡ್ಡಾಯವಾಗಿ ನಂದಿನಿ ತುಪ್ಪ ಮಾತ್ರ ಬಳಸುವಂತೆ ಧಾರ್ಮಿಕ ದತ್ತಿ ಇಲಾಖೆ ಸೂಚನೆ ನೀಡಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *