Breaking News

ಗೋದಾವರಿ ನದಿಯಲ್ಲಿ ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆ

ಅಮರಾವತಿ: ಆಂಧ್ರದ ಕೋನಸೀಮ ಜಿಲ್ಲೆಯಲ್ಲಿ ಗೋದಾವರಿ ನದಿಯಿಂದ ಅನಿಲ ಸೋರಿಕೆಯಾಗುತ್ತಿರುವುದು ಜನರನ್ನು ಭಯಭೀತರನ್ನಾಗಿಸಿದೆ. ಕಾಟ್ರೇನಿಕೋಣ ಮಂಡಲದ ಯಾಣಂ ದರ್ಯಾಲತಿಪ್ಪ ಮತ್ತು ಬಳುಸುತಿಪ್ಪ ನಡುವೆ ನದಿಯಲ್ಲಿ ಒಎನ್‌ಜಿಸಿ ಗ್ಯಾಸ್ ಪೈಪ್‌ಲೈನ್ ಹಾಕಿದೆ.
ಆದರೆ ಸೆ.20 ರಂದು ರಾತ್ರಿಯಿಂದಲೇ ಗ್ಯಾಸ್ ಸೋರಿಕೆಯಾಗುತ್ತಿದ್ದು, ಇದುವರೆಗೂ ಅಧಿಕಾರಿಗಳು ಪತ್ತೆ ಮಾಡದ ಕಾರಣ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ನೀರಿನ ಮೇಲೆ ಬುಗ್ಗೆಯಂತೆ ಚಿಮ್ಮುತ್ತಿರುವ ಗ್ಯಾಸ್​ ನದಿ ತಳಭಾಗದಲ್ಲಿ ಹಾಕಿರುವ ಪೀಪ್​ ಒಡೆದಿರುವುದರಿಂದ ಬರುತ್ತಿದೆ. ಇದೀಗ ಗ್ಯಾಸ್ ಹೊತ್ತಿ ಉರಿಯುವ ಭೀತಿ ಎದುರಾಗಿದೆ.
ಇನ್ನು ಗ್ಯಾಸ್ ಸೋರಿಕೆಯಿಂದ ವಾಸನೆ ಬರುತ್ತಿದ್ದು, ಇದುವರೆಗೂ ನಿರ್ವಹಣಾ ಸಂಸ್ಥೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಎನ್‌ಜಿಸಿ ತಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *