Breaking News

ವಿಜಯಪುರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಅಮೃತಧಾರೆ ತಾಯಿಹಾಲು ಕೇಂದ್ರ ಸ್ಥಾಪನೆ

ವಿಜಯಪುರ: ಜಿಲ್ಲೆಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೇವೆ ಜೊತೆಗೆ ಕಳೆದ ಸುಮಾರು ಒಂದೂವರೇ ವರ್ಷದಿಂದ ಅಮೃತಧಾರೆ ತಾಯಿಹಾಲು ಕೇಂದ್ರ ಸ್ಥಾಪನೆಯಾಗಿದ್ದು, ಹುಟ್ಟಿದ ಮಗುವಿಗೆ ಜೀವಾ ಮೃತವಾಗಿರುವ ತಾಯಿ ಎದೆ ಹಾಲು ವಂಚಿತ ಸಾವಿರಾರು ನವಜಾತ ಶಿಶುಗಳಿಗೆ ಬಿ.ಎಲ್.ಡಿ.ಇ ಉಚಿತವಾಗಿ ತಾಯಿ ಹಾಲು ಒದಗಿಸುವ ಮೂಲಕ ಕಾಮಧೇನುವಿನಂತೆ ಸಮಾಜಮುಖಿ ಸೇವೆಗೈಯುತ್ತಿದೆ.
ಕಳೆದ ಒಂದೂವರೇ ವರ್ಷಗಳ ಹಿಂದೆ ಆರಂಭಿಸಲಾದ ಸುಸಜ್ಜಿತ ಅಮೃತಧಾರೆ ತಾಯಿ ಹಾಲಿನ ಭಂಡಾರದಿಂದ ಇಲ್ಲಿಯವರೆಗೂ 1800 ಕ್ಕೂ ಅಧಿಕ ನವಜಾತ ಶಿಶುಗಳಿಗೆ ತಾಯಿ ಹಾಲು ಒದಗಿಸಿರುವುದು ವಿಶೇಷ. ಆಸ್ಪತ್ರೆಯಲ್ಲಿ 24/7 ತಾಯಿಹಾಲು ಕೇಂದ್ರಕ್ಕೆ ಪ್ರತ್ಯೇಕ ಘಟಕ ಮಾಡಿ ತಜ್ಞ ವೈದ್ಯರನ್ನು ಹೊರತುಪಡಿಸಿ 7 ರಿಂದ 8 ಜನ ನುರಿತ ವೈದ್ಯ ಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಎದೆಹಾಲು ಹೊಂದಿರುವ ತಾಯಂದಿರಿಗೆ ಆಪ್ತ ಸಮಾಲೋಚನೆ ಮಾಡಿ, ಅವರ ಒಪ್ಪಿಗೆ ಪಡೆದು ಕಡ್ಡಾಯವಾಗಿ ಹೆಚ್‌ಐವಿ, ಹೆಪಟೈಟಿಸ್‌ ಬಿ‌ ಅಯಂಡ್ ಸಿ ಮತ್ತು ವಿಡಿಆರ್‌ಎಲ್‌ ವೈದ್ಯಕೀಯ ಪರೀಕ್ಷೆಗಳನ್ನು‌ ನಡೆಸಿ ನೆಗೆಟಿವ್ ವರದಿ ಬಂದ‌ ಮೇಲೆ ಎದೆಹಾಲನ್ನು ಪಡೆಯಲಾಗುತ್ತದೆ ಎಂದು ತಾಯಿಹಾಲು ಭಂಡಾರದ ಮನಃಶಾಸ್ತ್ರಜ್ಞರಾದ ಉಮಾ ಪಾಟೀಲ ತಿಳಿಸಿದ್ದಾರೆ.
ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷರಾದ ಸಚಿವ ಡಾ.ಎಂ.ಬಿ.ಪಾಟೀಲರ ನಿರ್ದೇಶನದಂತೆ, ಉತ್ತರ ಕರ್ನಾಟಕ ಭಾಗದಲ್ಲಿ ತಾಯಿಶಿಶು ಮರಣ ಪ್ರಮಾಣ ತಗ್ಗಿಸಿ ಬಡ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಜೊತೆಗೆ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೇವೆ ಹಾಗೂ ತಾಯಿಹಾಲು ಭಂಡಾರ ಸ್ಥಾಪಿಸಲಾಗಿದೆ. ಇದರ ನಿರ್ವಹಣೆಗೆ ತಗಲುವ ವರ್ಷಕ್ಕೆ ಅಂದಾಜು 8 ರಿಂದ 10 ಲಕ್ಷವನ್ನು ಆಸ್ಪತ್ರೆಯಿಂದಲೇ ಭರಿಸಲಾಗುತ್ತದೆ. ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಿನ ದಿನಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಉದ್ದೇಶವಿದೆ ಎಂದು ಬಿಎಲ್ಡಿಇ ಸಂಸ್ಥೆಯ ಕುಲಪತಿ ಡಾ.ಆರ್.ಎಸ್. ಮುಧೋಳ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ ವಿವರಿಸಿದರು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *