ಕೊಲ್ಕತ್ತಾ: ಭಾರತ ಸರ್ಕಾರ ಘೋಷಿಸಿರುವ ಪದ್ಮಭೂಷಣ ಪ್ರಶಸ್ತಿಯಯನ್ನು ಹಿರಿಯ ಸಿಪಿಎಂ ಮುಖಂಡ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ತಿರಸ್ಕರಿಸಿದ್ದಾರೆ.
ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ತಿರಸ್ಕರಿಸಿದ ಅವರು “ಈ ಪ್ರಶಸ್ತಿ ಬಗ್ಗೆ ನನಗೇನೂ ತಿಳಿದಿಲ್ಲ.
“ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿರುವುದಾಗಿ ಘೋಷಿಸಲ್ಪಟ್ಟಿರುವ ಬುದ್ಧದೇವ್ ಭಟ್ಟಾಚಾರ್ಯ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸರ್ಕಾರ ನೀಡುವ ಅಂಥ ಪ್ರಶಸ್ತಿಗಳನ್ನು ನಿರಾಕರಿಸುವ ಸಿಪಿಎಂ ನೀತಿಯಲ್ಲಿ ಯಾವ ಬದಲಾವಣೆಯೂ ಇಲ್ಲ” ಎಂದು ಸಿಪಿಎಂ ರಾಜ್ಯ ಘಟಕ ಟ್ವೀಟ್ ಮಾಡಿದೆ.
“ನಮ್ಮ ಕೆಲಸ ಜನತೆಗಾಗಿಯೇ ವಿನಃ ಪ್ರಶಸ್ತಿಗಾಗಿ ಅಲ್ಲ. ಹಿಂದೆ ಕಾಮ್ರೇಡ್ ಇಎಂಎಸ್ ನಂಬೂದಿರಿಪಾಡ್ ಅವರೂ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು” ಎಂದು ವಿವರಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

