Breaking News

ಸಿಎಂ ಸಾಚಾ ಆಗಿದ್ದರೇ ರಾಜೀನಾಮೆ ನೀಡಲಿ: ಶೆಟ್ಟರ್ ಕಿಡಿ

ಹುಬ್ಬಳ್ಳಿ: ಸಿಎಂ ಸಾಚಾ ಆಗಿದ್ದರೇ ರಾಜೀನಾಮೆ ನೀಡಲಿ. ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಈ ಭಂಡತನ ಸರಿಯಲ್ಲಾ..
ಅಧಿಕಾರದಲ್ಲಿದ್ದು, ತನಿಖೆ ಎದುರಿಸುವುದು ನ್ಯಾಯ ಸಮ್ಮತವಾಗಲ್ಲ. ಈ ಭಂಡತನ ಮುಂದುವರಿದ್ರೆ ಜನ ದಂಗೆ ಎಳ ಬೇಕಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಒಬ್ಬ ಆರೋಪಿ ಸಿಎಂ ಹೇಗೆ ಮುಂದುವರಿಸಿತ್ತಿರಿ ಅಂತ ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಶ್ನೆ ಮಾಡುತ್ತೇವೆ ಎಂದರು.

ಮಾತು ಎತ್ತಿದ್ರೆ ಕಾಂಗ್ರೆಸ್ ನಾಯಕರು ಸಂವಿಧಾನದ ರಕ್ಷಕರು ಅಂತಾರೆ. ಆದ್ರೆ ಸಂವಿಧಾನದತ್ತ ರಾಜ್ಯಪಾಲ ಅಸ್ತಿತ್ವ ಪ್ರಶ್ನೆ ಮಾಡತ್ತಾರೆ. ಅರ್ಕಾವತಿ ಹಗರಣದಲ್ಲಿಯೇ ಸಿಎಂ ಹೋಗಬೇಕಿತ್ತು ಎಂದು ಅವರು ಹೇಳಿದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *