Breaking News

ಲಕ್ಷಾಂತರ ರೂಪಾಯಿ ನಕಲಿ ಸಿಗರೇಟ್‌ ವಶ

ನವಲಗುಂದ: ಪಟ್ಟಣದ ಶೆಟ್ಟರ ಕೆರೆಯ ಹತ್ತಿರ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಟಿಸಿ ಕಂಪನಿಯ ನಕಲಿ ಸಿಗರೇಟ್ ವಾಹನವನ್ನು ಇಂದು ಬೆಳಿಗ್ಗೆ ಪೊಲೀಸರು ಹಾಗೂ ಐಟಿಸಿ ಕಂಪನಿಯವರ ದಾಳಿ ಮಾಡಿ ಲಕ್ಷಾಂತರ ರೂಪಾಯಿ ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಕಲಿ ಸಿಗರೇಟ್ ಮಾರಾಟಗಾರ ಮಹಮ್ಮದ್ ನೌಶಾದ್‌ ಮೋಹಿದ್ದಿನ್ (24) ಉಡುಪಿಯ ಸಂತೇಕಟ್ಟಿ ಗ್ರಾಮದ ಈತ ಬೆಳಗಾವಿದಿಂದ ಬಿಜಾಪು‌ರ್, ಬಾಗಲಕೋಟೆ ಸೇರಿದಂತೆ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಾ ಬರುತ್ತಿದ್ದ. ಈ ವೇಳೆ ಈತನನ್ನು ಪೊಲೀಸರು ಹಾಗೂ ಐಟಿಸಿ ಕಂಪನಿಯ ಶ್ರೀನಿವಾಸ ಎಸ್‌ ಅವರೊಂದಿಗೆ ದಾಳಿ ನಡೆಸಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ಸಿಗರೇಟಗಳನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಪೊಲೀಸರು ಪಂಚನಾಮೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ವೇಳೆ ಪಿಎಸ್‌ಐ ಜನಾರ್ಧನ್ ಭಟ್ರಳ್ಳಿ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಐಟಿಸಿ ಕಂಪನಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share News

About Shaikh BigTv

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *