Breaking News

ಸಿಬಿಎಸಿ ಸೌತ್ ಜೋನ್ 2 ಸ್ಕೆಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ವಿದ್ಯಾರ್ಥಿಯರ ಸಾಧನೆ

ಹುಬ್ಬಳ್ಳಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್‌ (ಸಿಬಿಎಸಿ) ಸಿಬಿಎಸಿ ಸೌತ್ ಜೋನ್ 2 ಸ್ಕೆಟಿಂಗ್ ಸ್ಪರ್ಧೆ 2024-2025 ಬೆಳಗಾವಿಯ ಗುಡ್ ಶೆಪರ್ಡ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ ಅಕಾಡೆಮಿಯ ಇನ್ಸೆನ್ ವಿಭಾಗದ ಸ್ಕೆಟರ್ ಕುಮಾರಿ ಸಾನ್ವಿ ಸಾಂಬ್ರಾಣಿ ( ಕೆ. ಎಲ್. ಇ ಆಂಗ್ಲ ಮಾಧ್ಯಮ ಶಾಲೆ ಮಂಜುನಾಥ್ ನಗರ ) ಒಂದು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಗೆದ್ದಿದ್ದು, ಹಾಗೂ ಸಮರ್ಥ ಮರಾಠ (ಯಸ್. ಆ‌ರ್.ಬೊಮ್ಮಾಯಿ ರೋಟರಿ ಪಬ್ಲಿಕ್ ಸ್ಕೂಲ್) ಒಂದು ಕಂಚಿನ ಪದಕ ಗೆದ್ದಿದ್ದಾರೆ.

ಇವರು ಹುಬ್ಬಳಿಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ತರಬೇತುದಾರರಾದ ಅಕ್ಷಯ್ ಸೂರ್ಯವಂಶಿಯವರ ಬಳಿ ತರಬೇತಿ ಪಡೆದಿದ್ದಾರೆ .ಅಕ್ಟೋಬರ್ 24 ರಿಂದ 27ರ 2024ನಲ್ಲಿ ನಡೆಯಲಿರುವ ಸಿಬಿಎಸ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸಾನ್ವಿ ಸಾಂಬ್ರಾಣಿ (ಕೆ.ಎಲ್. ಇ ಆಂಗ್ಲ ಮಾಧ್ಯಮ ಶಾಲೆ ಮಂಜುನಾಥ್ ನಗರ ) ಆಯ್ಕೆ ಯಾಗಿದ್ದು, ಈ ಸಾಧನೆಯನ್ನು ಹುಬ್ಬಳ್ಳಿ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಸಿ. ಸಿ ಯಾವರು ಹಾಗು ಸದಸ್ಯರು, ಪೋಷಕರು, ಪ್ರಶಂಸಿಸಿದ್ದಾರೆ.

Share News

About Shaikh BigTv

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *