ಇಡೀ ದೇಶದಲ್ಲೇ ಭಾರೀ ಕುತೂಹಲ ಮೂಡಿಸಿರುವ ಕಾಂತಾರ ಚಾಪ್ಟರ್ 1 ಸಿನೆಮಾ ಈಗಾಗಲೇ ಶೂಟಿಂಗ್ ಕಾರ್ಯ ಮುಗಿಸಿದೆ. ಇದೀಗ ಈ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಈ ಶುಭದಿನದಂದು, ಚಿತ್ರತಂಡವು ಅವರ ಫಸ್ಟ್ ಲುಕ್ ರಿಲೀಸ್ ಮಾಡಿದೆ.ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಶೂಟಿಂಗ್ ಸಂಪೂರ್ಣವಾಗಿದ್ದು, ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ನಾಯಕ ನಟ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಅವರ ಫಸ್ಟ್‌ಲುಕ್ ಮತ್ತು ನಂತರ ಬಂದ ಶೂಟಿಂಗ್ ಮುಕ್ತಾಯದ ವೀಡಿಯೋಗಳು ಈಗಾಗಲೇ ಭಾರೀ ಕುತೂಹಲ ಮೂಡಿಸಿವೆ. ಇದೀಗ ‘ಕನಕವತಿ’ಯ ಪಾತ್ರದ ಪರಿಚಯ, ಚಿತ್ರದ ಕುರಿತಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

