ವೈಝಾಗ್: ರತನ್ ಟಾಟಾ ಕಟ್ಟಿದ ಉದ್ಯಮ ಸಾಮ್ರಾಜ್ಯದಲ್ಲಿ ಟಿಸಿಎಸ್(ಟಾಟಾ ಕನ್ಸಲ್ಟೆನ್ಸಿ ಸರ್ವೀಸ್) ಕೂಡ ಒಂದು. ಇದೀಗ ಟಿಸಿಎಸ್ ಹಾಗೂ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ ಆಂಧ್ರ ಪ್ರದೇಶದ ವೈಝಾಗ್‌ನಲ್ಲಿ ಐಟಿ ಕೇಂದ್ರ ಸ್ಥಾಪನೆ ಮಾಡಲು ಟಿಸಿಎಸ್ ಮುಂದಾಗಿದೆ.
ಈ ಐಟಿ ಕೇಂದ್ರದಿಂದ ಬರೋಬ್ಬರಿ 10,000 ಮಂದಿಗೆ ಉದ್ಯೋಗವಕಾಶ ಸಿಗಲಿದೆ. ಈ ಕುರಿತು ಆಂಧ್ರ ಪ್ರದೇಶ ಸಂಪುಟ ಸಚಿವ ನಾರಾ ಲೋಕೇಶ್ ಹೇಳಿದ್ದಾರೆ.
ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಾರ್ಯನಿರ್ವಹಿಸುತ್ತಿದೆ. ಇದೀಗ ಹೊಸ ಕೇಂದ್ರವನ್ನು ವೈಝಾಗ್‌ನಲ್ಲಿ ಆರಂಭಿಸುತ್ತಿದೆ. ಈ ಘಟಕದಿಂದ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಪ್ರತಿಭಾನ್ವಿತರಿಗೆ ಉದ್ಯೋಗವಕಾಶ ಸಿಗಲಿದೆ.
ಟಿಸಿಎಸ್ ಐಟಿ ಘಟಕ ಸ್ಥಾಪನೆ ಕುರಿತು ಸುದ್ದಿಗೋಷ್ಠಿ ನಡೆಸಿದ ಸಚಿವ ನಾರಾ ಲೋಕೇಶ್, ಸಂತಸ ಹಂಚಿಕೊಂಡಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿಗೆ ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದೇವೆ. ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ ಆಂಧ್ರ ಪ್ರದೇಶ ಇದೀಗ ಹಲವು ಕಂಪನಿಗಳ ಐಟಿ ಹಬ್ ಆಗಿ ಮಾರ್ಪಟ್ಟಿದೆ. ವಿಶ್ವ ಮಟ್ಟದ ಅನುಕೂಲಕತೆಗಳು, ವಿಶ್ವದರ್ಜೆ ವ್ಯವಸ್ಥೆಗಳು ಸರ್ಕಾರ ಮಾಡಿಕೊಡಲಿದೆ ಎಂದು ನಾರಾ ಲೋಕೇಶ್ ಹೇಳಿದ್ದಾರೆ. ಟಿಸಿಎಸ್ ಹೊಸ ಘಟಕ ಶೀಘ್ರದಲ್ಲಿ ಕಾರ್ಯಾರಂಭ ಮಾಡುವಂತೆ ಎಲ್ಲಾ ನೆರವು ಸರ್ಕಾರ ನೀಡಲಿದೆ ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

