ಲಖನೌ: 2019ರ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲು ಚುನಾವಣೆಯ ದಿನಾಂಕ ಹತ್ತಿರವಾದಂತೆಲ್ಲಾ ಇದರ ರಂಗು ಮತ್ತಷ್ಟು ಹೆಚ್ಚಾಗುತ್ತಿದೆ. ಒಂದೆಡೆ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳೂ ಮತದಾರರನ್ನ ಓಲೈಸೋಕೆ ನಾನಾ ಸರ್ಕಸ್ ಮಾಡ್ತಿವೆ. ಇನ್ನು, ಅಭ್ಯರ್ಥಿಗಳಂತೂ ಮನೆ ಮನೆ ಪ್ರಚಾರವನ್ನೂ ನಡೆಸ್ತಿದ್ದಾರೆ. ಮತ್ತೊಂದೆಡೆ ಸರ್ಕಾರ, ಚುನಾವಣಾ ಆಯೋಗ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿವೆ.ಈ ನಡುವೆ ಜನ ಸಾಮಾನ್ಯರು, ಸಂಘ ಸಂಸ್ಥೆಗಳು ಕೂಡ ಮತದಾರರಲ್ಲಿ ಅವರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನ ಮಾಡುತ್ತಿವೆ. ಇದರಲ್ಲಿ ಶಿಕ್ಷಣ ಸಂಸ್ಥೆಗಳು ಕೂಡ ಹಿಂದೆ ಬಿದ್ದಿಲ್ಲ. ಇದೀಗ ಲಖನೌನ ಶಾಲೆಯೊಂದು ವಿಶಿಷ್ಟ ರೀತಿಯಲ್ಲಿ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಮೇ 6ರಂದು ಲಖನೌನಲ್ಲಿ ಸಂಸದೀಯ ಚುನಾವಣೆ ನಡೆಯಲಿದೆ. ಹೀಗಾಗಿ ಇಲ್ಲಿ ಕ್ರೈಸ್ಟ್ ಚರ್ಚ್ ಕಾಲೇಜು ತನ್ನ ವಿದ್ಯಾರ್ಥಿಗಳಲ್ಲಿ ಹಾಗೂ ಅವರ ಪೋಷಕರಲ್ಲಿ ಮತದಾನ ಮಾಡುವಂತೆ ಉತ್ತೇಜಿಸುತ್ತಿದೆ. ಅಲ್ಲದೆ, ಯಾವ ವಿದ್ಯಾರ್ಥಿಯ ಪೋಷಕರು ವೋಟ್ ಹಾಕ್ತಾರೋ ಅಂಥ ವಿದ್ಯಾರ್ಥಿಗೆ ಅವರ ಫೈನಲ್ ರಿಸಲ್ಟ್ನಲ್ಲಿ 10 ಅಂಕಗಳನ್ನ ಹೆಚ್ಚಿಗೆ ನೀಡೋದಾಗಿಯೂ ಕ್ರೈಸ್ಟ್ ಚರ್ಚ್ ಕಾಲೇಜು ಹೇಳಿದೆ. ಈ ಬಗ್ಗೆ ತನ್ನ ಶಾಲೆಯ ಗೇಟ್ಗೆ ಬ್ಯಾನರ್ ಕೂಡ ಹಾಕಿಸಿದೆ.ಇದು ಕೇವಲ ಕ್ರೈಸ್ಟ್ ಚರ್ಚ್ ಕಾಲೇಜು ಮಾತ್ರ, ಇದೇ ರೀತಿ ಲಖನೌನ ವಿವಿಧ ಶಾಲೆಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಲವು ಕ್ರಮಗಳನ್ನ, ಕಾರ್ಯಕ್ರಮಗಳನ್ನ ನಡೆಸಲಾಗುತ್ತಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





