Breaking News

ಷೇರುಪೇಟೆ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಸೆನ್ಸೆಕ್ಸ್, ನಿಫ್ಟಿ ಕುಸಿತ

ಮುಂಬೈ: ವಾರದ ಆರಂಭಿಕ ವಹಿವಾಟಿನಲ್ಲೇ ಷೇರುಪೇಟೆಯಲ್ಲಿ ಹಾವುಏಣಿಯಾಟ ಶುರುವಾಗಿದೆ. ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬಳಿಕ ಕುಸಿದಿವೆ.
ನಿಫ್ಟಿ 124 ಅಂಶಗಳ ಏರಿಕೆಯೊಂದಿಗೆ 24,978ರಲ್ಲಿ ವಹಿವಾಟು ಆರಂಭಿಸಿದರೆ, ಬಿಎಸ್‌ಇ ಸೆನ್ಸೆಕ್ಸ್ 545 ಅಂಶಗಳ ಏರಿಕೆಯೊಂದಿಗೆ 81,770ರಲ್ಲಿ ವಹಿವಾಟು ಆರಂಭಿಸಿತ್ತು.
ಬಳಿಕ ಸೆನ್ಸೆಕ್ಸ್ 136 ಮತ್ತು ನಿಫ್ಟಿ 100 ಅಂಶಗಳಷ್ಟು ಕುಸಿದವು.
ಇಂದು ಸೆನ್ಸೆಕ್ಸ್‌ನ ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್, ಏಷಿಯನ್ ಪೇಟ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಷೇರುಗಳು ಲಾಭ ಗಳಿಸಿವೆ.
ಸೆಪ್ಟೆಂಬರ್ ತ್ರೈಮಾಸಿಕ ನಿವ್ವಳ ಆದಾಯ ಹೆಚ್ಚಳವಾದ ಹಿನ್ನೆಲೆಯಲ್ಲಿ ಎಚ್‌ಡಿಎಫ್‌ಸಿ ಷೇರು ಬೆಲೆ ಶೇ 3ರಷ್ಟು ಏರಿಕೆ ದಾಖಲಿಸಿದೆ.
ಕೋಟಕ್ ಮಹೀಂದ್ರ ಬ್ಯಾಂಕ್, ಭಾರ್ತಿ ಏರ್‌ಟೆಲ್, ಇಂಡಸ್‌ಲ್ಯಾಮಡ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ ನತ್ತು ಎನ್‌ಟಿಪಿಸಿ ನಷ್ಟ ಕಂಡ ಕಂಪನಿಗಳಾಗಿವೆ.
ತ್ರೈಮಾಸಿಕ ವರದಿಯು ಹೂಡಿಕೆದಾರರ ಮನಗೆಲ್ಲುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೋಟಕ್ ಶೇ 5ರಷ್ಟು ಕುಸಿದಿದೆ.
ಏಷ್ಯಾ ಷೇರುಪೇಟೆಗಳ ಪೈಕಿ ಸೋಲ್, ಟೋಕಿಯೊ, ಶಾಂಘೈ ಏರಿಕೆ ಕಂಡರೆ, ಹಾಂಗ್‌ಕಾಂಗ್‌ ಷೇರುಪೇಟೆ ಕುಸಿದಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *