Breaking News

ಭಾರತದಲ್ಲಿ ಮೊದಲ ಬಾರಿಗೆ ಕಾರ್ಬನ್ ಕ್ರೆಡಿಟ್ ಪ್ರಯೋಗ: ಎಂಟು ರಾಜ್ಯಗಳ ರೈತರಿಗೆ ಅವಕಾಶ

ನವದೆಹಲಿ: ಪರಿಸರಸ್ನೇಹಿ ಕೃಷಿ ವಿಧಾನಗಳನ್ನು ಅನುಸರಿಸಲು ರೈತರಿಗೆ ಪ್ರೇರಣೆ ನೀಡಬಲ್ಲಂತಹ ಕಾರ್ಬನ್ ಕ್ರೆಡಿಟ್ ಪ್ರಯೋಗ ಭಾರತದಲ್ಲಿ ಮೊದಲ ಬಾರಿಗೆ ಆರಂಭವಾಗುತ್ತಿದೆ. ಭಾರತದ ಪ್ರಮುಖ ಬೀಜ ಕಂಪನಿ ಮಹಿಕೋ ಮತ್ತು ಅಮೆರಿಕದ ಇಂಡಿಗೋ ಜಂಟಿಯಾಗಿ ಸ್ಥಾಪಿಸಿರುವ ಗ್ರೋ ಇಂಡಿಗೋ ಸಂಸ್ಥೆ ಇಂಥದ್ದೊಂದು ಪ್ರಯೋಗ ನಡೆಸುತ್ತಿದೆ. ಮೊದಲಿಗೆ ದೇಶದ ಎಂಟು ರಾಜ್ಯಗಳ 80,000 ಸಣ್ಣ ರೈತರನ್ನು ಈ ಸ್ಕೀಮ್​ಗೆ ಆಯ್ದುಕೊಳ್ಳಲಾಗಿದೆ. ಪರಿಸರಸ್ನೇಹಿ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಕಾರ್ಬನ್ ಕ್ರೆಡಿಟ್ ರೂಪದಲ್ಲಿ ಹಣ ಸಿಗಲಿದೆ.
ಮಿತವಾಗಿ ನೀರು ಬಳಕೆ, ಕಡಿಮೆ ಹೊಲ ಉಳುವಿಕೆ, ಡಿಎಸ್​ಆರ್ ತಂತ್ರ ಬಳಕೆ, ಮಣ್ಣಿನ ಸಾರ ಉಳಿಸುವಿಕೆ, ನೈಟ್ರೋಜನ್ ಗೊಬ್ಬರ ನಿರ್ವಹಣೆ, ಕೃಷಿ ಅರಣ್ಯ ಇತ್ಯಾದಿ ವಿಧಾನಗಳನ್ನು ಅನುಸರಿಸುವ ರೈತರಿಗೆ ಅಗತ್ಯ ಕಾರ್ಬನ್ ಕ್ರೆಡಿಟ್ ಸಿಗುತ್ತದೆ. ಈ ಕಾರ್ಬನ್ ಕ್ರೆಡಿಟ್ ಅನ್ನು ಯಾವುದಾದರೂ ಕೈಗಾರಿಕೆಗಳು ಹಣಕ್ಕೆ ಖರೀದಿಸಬಹುದು. ಈ ಮೂಲಕ ರೈತರಿಗೆ ಪರಿಸರಸ್ನೇಹಿ ಕೃಷಿ ವಿಧಾನ ಅನುಸರಿಸಿದ್ದಕ್ಕೆ ಕಾರ್ಬನ್ ಕ್ರೆಡಿಟ್ ಮೂಲಕ ಆದಾಯವೂ ಪ್ರಾಪ್ತವಾಗುತ್ತದೆ.
ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ 80,000 ರೈತರನ್ನು ಇದಕ್ಕಾಗಿ ಆಯ್ದುಕೊಳ್ಳಲಾಗಿದೆ. ಈ ಸ್ಕೀಮ್ ವ್ಯಾಪ್ತಿಯಲ್ಲಿ ಒಟ್ಟು ಕೃಷಿ ಜಮೀನು 40,000 ಹೆಕ್ಟೇರ್​ನಷ್ಟಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *