Breaking News

ಮಾ.26 ರಂದು ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.೨೬ ಮತ್ತು ೨೭ ಶನಿವಾರ ಮತ್ತು ರವಿವಾರ, ಧಾರವಾಡದ ಆರ್.ಎನ್ ಶೇಟ್ಟಿ ಕ್ರಿಡಾಂಗಣದ ಹತ್ತಿರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೋಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅದ್ಯಕ್ಷ ಡಾ.ಲಿಂಗರಾಜ ಅಂಗಡಿ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವು ೨ ದಿನಗಳ ಕಾಲ ನಡೆಯಲ್ಲಿದ್ದು ರಾಷ್ಟ್ರ ಧ್ವಜಾರೋಹಣ ವನ್ನು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಕನ್ನಡ ಧ್ವಜಾರೋಹಣ ವನ್ನು ಸಾ.ಶಿ ಇಲಾಖೆ ಧಾರವಾಡದ ಉಪ ನಿರ್ಧೇಶಕರಾದ ಎಸ್ ಎಸ್ ಕೆಳದಿಮಠ ಮಾಡುವರು ಎಂದರು.
ಮುಂದುವರೆದು ಮಾತನಾಡಿದ ಅವರು ಕನ್ನಡಕ್ಕಾಗಿ ನಡಿಗೆಯನ್ನು ಕೆಸಿಸಿ ಬ್ಯಾಂಕ್ ವೃತ್ತದಿಂದ ಸಮ್ಮೇಳನದ ಸಭಾಂಗಣದ ವರೆ ಬೆಳಿಗ್ಗೆ ೯.೩೦ ಕ್ಕೆ ಮೆರವಣಿಗೆ ನಡೆಯಲಿದೆ, , ಮತ್ತು ಕನ್ಮರೆಯಾದರೂ ನಮ್ಮೋಳಗುಳಿದರು, ಮಹಿಳಾ ಕವಿಗೋಷ್ಠಿ, ಸಾಹಿತ್ಯ ಮೂಲಕ ಸೌಹಾರ್ದತೆ, ವೃತ್ತಿ ಸಾಹಿತ್ಯ ಒಂದು ಅವಲೋಕನ, ಸರ್ವಧ್ಯಕ್ಷರೊಂದಿಗೆ ಸಂವಾದ ಮತ್ತು ಪುರುಷರ ಕವಿಗೋಷ್ಠಿ ಒಟ್ಟು ೬ ಗೋಷ್ಠಿಗಳು ನಡೆಯಲಿವೆ, ಮತ್ತು ಮಕ್ಕಳ ಸಾಹಿತ್ಯ ಉಪನ್ಯಾಸ, ಬಹಿರಂಗ ಅಧಿವೇಶನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪ್ರೋ ಕೆ.ಎಸ್ ಕೌಜಲಗಿ ಕಾರ್ಯದರ್ಶಿ ಜಿಲ್ಲಾ ಕಸಾಪ, ಡಾ. ಜಿನದತ್ತ ಹಡಗಲಿ, ಡಾ.ಎಸ್ ಎಸ್ ದೊಡ್ಡಮನಿ, ಗುರುಸಿದ್ದಪ್ಪ ಬಡಿಗೇರ, ಮತ್ತು ಚನ್ನಬಸಪ್ಪ ಧಾರವಾಡಶೇಟ್ಟರ ಉಪಸ್ಥಿತರಿದ್ದರು.
.

Share News

About admin

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *