ಕುಮಟಾ: ಹುಬ್ಬಳ್ಳಿಯಿಂದ ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರಕಾರಿ ಆಸ್ಪತ್ರೆ ಕ್ವಾರ್ಟಸ್‌್ರ ಬಳಿ ನಡೆದಿದೆ.
ಹುಬ್ಬಳ್ಳಿ ಮೂಲದ ಇಮ್ಮಿಯಾಝ್ (25) ಕೊಲೆಯಾದ ಯುವಕ. ಗಾರೆ ಕೆಲಸಕ್ಕಾಗಿ ಕಳೆದ ಒಂದು ತಿಂಗಳಿನಿಂದ ಕುಮಟಾ ಸರಕಾರಿ ಆಸ್ಪತ್ರೆ ಕ್ವಾರ್ಟಸ್‌್ರನಲ್ಲಿ ತಂಗಿದ್ದ. ಈತನ ಜೊತೆ ಹುಬ್ಬಳ್ಳಿ ಮೂಲದ ಮೊಯುದ್ದೀನ್, ಮೌನೇಶ್ ಹಾಗೂ ಸಾದಿಕ್ ಕೂಡ ಇದ್ದರು.
ಇಮ್ಮಿಯಾಝ್ ಕೊಲೆಯ ಬಳಿಕ ಜೊತೆಗಿದ್ದ ಮೂವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧಿಸಿ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ಮೌನೇಶ್ ಹಾಗೂ ಸಾಧಿಕ್ ಬಂಧಿತ ಆರೋಪಿಗಳಾಗಿದ್ದು, ಭಾನುವಾರ ಮಧ್ಯರಾತ್ರಿ ಸುಮಾರು 12ಗಂಟೆ ಸುಮಾರಿಗೆ ಕೊಲೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಕೊಲೆಯ ನೈಜ ಕಾರಣ ಆರೋಪಿಗಳ ವಿಚಾರಣೆ ಬಳಿಕವೇ ತಿಳಿಯಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

