ಕಲಘಟಗಿ : ಕಲಘಟಗಿ ಪಟ್ಟಣದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಇಂದು ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿ ನಡೆದಿತ್ತು.
ಮಾರುಕಟ್ಟೆಯಲ್ಲಿ ಹಣ್ಣು ಹಂಪಲುಗಳು ದರ ಗಗನಕ್ಕೆ ಏರಿದ್ದರು ಖರೀದಿ ಮಾತ್ರ ಜೋರಾಗಿ ಇತ್ತು. ಇನ್ನು ಹೂವಿನ ದರ ಕೇಳಿದ್ರೆ ಜನರಿಗೆ ನುಂಗಲಾರದ ತುತ್ತಾಗಿತ್ತು.
ಗ್ರಾಮೀಣ ಭಾಗದ ಜನರಿಗೆ ಮುಖ್ಯ ಅವಶ್ಯಕತೆ ಇರುವ ಎತ್ತುಗಳಿಗೆ ಅಲಂಕಾರ ಮಾಡುವ ಘಂಟೆ ಹಗ್ಗ ಕಪ್ಪು ದಾರ ಇನ್ನು ಮುಂತಾದ ವಸ್ತುಗಳು ಖರೀದಿಗಾಗಿ ರೈತರು ಆಗಮಿಸಿದ್ದರು.
ಅಷ್ಟೆ ಅಲ್ಲದೆ ಅಂಗಡಿಗಳಲ್ಲಿ ವಿವಿಧ ರೀತಿಯ ಆಕಾಶಬುಟ್ಟಿಗಳು ಬಾಳಿ ಕಂಬಗಳು ಹಾಗೂ ಕಬ್ಬು ಮಾರಾಟಕ್ಕೆ ಆಗಮಿಸದ್ದು ಖರೀದಿಗಾಗಿ ಜನರು ಆಗಮಿಸಿದ್ದು ವಿಶೇಷವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

