Breaking News

ಕಲಬುರಗಿಯಲ್ಲಿ ಅಕ್ರಮವಾಗಿ ಕಬ್ಬಿನ ಬೆಳೆ ಮಧ್ಯೆ ಬೆಳೆದಿದ್ದ ಗಾಂಜಾ ಜಪ್ತಿ

ಕಲಬುರಗಿ : ಅಫಜಲಪುರ ತಾಲೂಕಿನ ಗೊಬ್ಬರ ಬಿ.ಗ್ರಾಮದ ಜಮೀನೊಂದರ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು, ಅಕ್ರಮವಾಗಿ ಕಬ್ಬಿನ ಬೆಳೆ ಮಧ್ಯೆ ಬೆಳೆದಿರುವ ಗಾಂಜಾ ಗಿಡಗಳು ವಶಪಡಿಸಿಕೊಂಡಿದ್ದಾರೆ.
ದಾಳಿ ನಡೆಸಿದ ಅಧಿಕಾರಿಗಳು, ಒಟ್ಟು 57.7.ಕೆ.ಜಿ. ಒಣ ಗಾಂಜಾ ಮತ್ತು 15 ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜಮೀನಿನ ಮಾಲೀಕರ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ-1985ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿಯಲ್ಲಿ ಆಳಂದ ವಲಯ ಕಛೇರಿಯ ಅಬಕಾರಿ ನಿರೀಕ್ಷಕ ಶ್ರೀಧರ ನಿರೋಣಿ, ಅಬಕಾರಿ ಉಪ ನಿರೀಕ್ಷಕ ಬಸವರಾಜ ಮಾಲಗತ್ತಿ ಹಾಗೂ ಕಲಬುರಗಿ ವಿಭಾಗ ಕಛೇರಿಯ ಅಬಕಾರಿ ನಿರೀಕ್ಷಕ ನರೇಂದ್ರಕುಮಾರ ಹೊಸಮನಿ ಸೇರಿದಂತೆ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *