Breaking News

ಯತ್ನಾಳ ಪ್ರಕರಣಗಳ ವಿಚಾರಣೆಗೆ ಒಂದು ದಿನವನ್ನೇ ಮೀಸಲಿಡಬೇಕು: ಹೈಕೋರ್ಟ್

ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ಮಾಡಬೇಕಾದರೆ ಕನಿಷ್ಠ ಒಂದು ದಿನವನ್ನೇ ಆ ಪ್ರಕರಣಗಳಿಗಾಗಿ ಮೀಸಲಿಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
ಟಿಪ್ಪು ಸುಲ್ತಾನ್‌ ಲಕ್ಷಾಂತರ ಹಿಂದೂಗಳ ಕೊಲೆ ಮಾಡಿದ್ದಾನೆ. ಅವನು ಹರಾಮ್​​​​ಕೋರ ಎಂದು ಮೇ.1ರಂದು (2023) ಯತ್ನಾಳ್​​ ಚುನಾವಣೆಯ ಪ್ರಚಾರದ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಂದು ಯತ್ನಾಳ್ ಧಾರವಾಡದ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಪ್ರಚಾರದಲ್ಲಿ ಈ ಮಾತನ್ನು ಆಡಿದ್ದರು. ಈ ಆರೋಪದಡಿ ಕುಂದಗೋಳ ಠಾಣೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಸೆಕ್ಷನ್‌ 123 (3A), 125 ಅಡಿ ಪ್ರಕರಣವೂ ದಾಖಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿರುವ ಹೈಕೋರ್ಟ್​​​​ನ ನ್ಯಾ.ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಕುಂದಗೋಳ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್‌ ರದ್ದುಪಡಿಸಿ ಆದೇಶ ನೀಡಿದೆ. ರಾಹುಲ್‌ ಗಾಂಧಿ ಮುಸ್ಲಿಂ ಅಥವಾ ಕ್ರಿಶ್ಚಿಯನ್‌ ಸಮುದಾಯಕ್ಕೋ, ಯಾವ ಜಾತಿಗೆ ಹುಟ್ಟಿದ್ದಾರೆ ಎಂದು ಕೋಮು ದ್ವೇಷ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪವೂ ಯತ್ನಾಳ್ ಮೇಲಿದೆ. ಈ ಬಗ್ಗೆ ಕಲಬುರಗಿ ನಗರದ ರೋಜಾ, ಬೆಂಗಳೂರಿನ ಹೈಗ್ರೌಂಡ್ಸ್‌ ಸ್ಟೇಷನ್​​​​​​ನಲ್ಲಿ ದಾಖಲಾಗಿದ್ದ ಪ್ರತ್ಯೇಕ ಕೇಸ್​​​​ಗಳ ಮುಂದಿನ ವಿಚಾರಣೆ ನ.28ಕ್ಕೆ ಕೋರ್ಟ್​ ಮುಂದೂಡಿದೆ.
ಸಚಿವ ದಿನೇಶ್​ ಗುಂಡೂರಾವ್​​​​​ ಅವರ ಮನೆಯು ಅರ್ಧ ಪಾಕಿಸ್ತಾನದಂತಿದೆ ಎಂಬ ಯತ್ನಾಳ್​​ ಹೇಳಿಕೆಯೂ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯನ್ನೂ ಖಂಡಿಸಿದ್ದ ಹೈಕೋರ್ಟ್​ ಇತ್ತೀಚೆಗೆ ಛೀಮಾರಿ ಕೂಡ ಹಾಕಿತ್ತು. ಯತ್ನಾಳ್​​​ ಅವರು ಮಾತನಾಡಬೇಕಾದರೆ ಬಲು ಎಚ್ಚರಿಕೆಯಿಂದ ಇರಬೇಕೆಂದು ತಿಳಿಹೇಳಿ ಅಂತಾ ಯತ್ನಾಳ್ ಪರ ವಕೀಲರಾದ ವೆಂಕಟೇಶ್​​ ಅವರಿಗೆ ಹೈಕೋರ್ಟ್​​​ ಮೌಖಿಕವಾಗಿ ನಿರ್ದೇಶನವೂ ನೀಡಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *