Breaking News

ಪಾಕಿಸ್ತಾನದ ರೈಲು ನಿಲ್ದಾಣದಲ್ಲಿ ಭಾರೀ ಬಾಂಬ್ ಸ್ಫೋಟ: 25 ಜನ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಇಂದು ಸಂಭವಿಸಿದ ಭಾರಿ ಬಾಂಬ್ ಸ್ಫೋಟದ್ದು ಎನ್ನಲಾದ ಸಿಸಿಟಿವ ದೃಶ್ಯಾವಳಿಯೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬಾಂಬ್ ಸ್ಫೋಟ ಸಂಭವಿಸಿದ ಕ್ಷಣ, ಸ್ಫೋಟದ ತೀವ್ರತೆಗೆ ರೈಲು ನಿಲ್ದಾಣ ಛಿದ್ರಗೊಂಡಿರುವ ಸಿಸಿಟಿವಿ ದೃಶ್ಯ ಎಂದು ಸ್ಪುಟ್ನಿಕ್ ಇಂಡಿಯಾ ತಾಣ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. ಆ ವಿಡಿಯೋ ಇಲ್ಲಿದೆ.
ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದು, ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯ ತೀವ್ರತೆಗೆ ರೈಲು ನಿಲ್ದಾಣದ ಚಾವಣಿ ಛಿದ್ರಗೊಂಡಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *