ಕುಂದಗೋಳ : ಹೊಲಿಗೆ ಕ್ಲಾಸ್ ಪ್ರವೇಶಾತಿ ಪಡೆದುಕೊಂಡು ಬರುತ್ತೇನೆ ಎಂದು ಹೋದ ವಿದ್ಯಾರ್ಥಿನಿ ಓರ್ವಳು ಕಾಣೆಯಾದ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು ! ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಸುಮಾ ಶೇಖಪ್ಪ ಕುಸುಗಲ್ ಎಂಬ 21 ವರ್ಷದ ಯುವತಿ ಕುಂದಗೋಳ ಪಟ್ಟಣದ ಟೇಲರಿಂಗ್ ಕ್ಲಾಸ್’ಗೆ ಹೋಗಿ ಬರುತ್ತೇನೆ ಎಂದು ಡಿಸೇಂಬರ್ 4 ರಿಂದ ಮನೆಯಿಂದ ಹೊರ ಹೋದವಳು ಕಾಣೆ ಆಗಿದ್ದಾಳೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿ ಪತ್ತೆಗೆ ಪೋಷಕರು ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





