ಹುಬ್ಬಳ್ಳಿ : ನಗರದ ಕಾಟನ್ ಮಾರ್ಕೆಟ್ ನಲ್ಲಿರುವ
ಸಾಂಸ್ಕೃತಿಕ ಭವನ ಯಾವುದೇ ರೀತಿಯ ವ್ಯವಸ್ಥೆ ಇಲ್ಲದೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿರುವ ಈ ಭವನ ಪಾಳು ಬಿದ್ದುತ್ತು. ಪಾಲಿಕೆ ಆಯುಕ್ತರು ಸಾಂಸ್ಕೃತಿಕ ಭವನವನ್ನು ನಿರ್ವಹಣೆ ಮಾಡಲು ಮುಂದಾಗಿದ್ದಾರೆ.
ಭವನದ ವಾಸ್ತವ ಸತ್ಯವನ್ನು, ಕಲಾವಿದರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನೀರ್ಧಾರ ತೆಗೆದುಕೊಳ್ಳಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಈ ಸಾಂಸ್ಕೃತಿಕ ಭವನವನ್ನು ನಿರ್ಮಾಣ ಮಾಡಿದ್ದರು. ಆದ್ರೆ ನಿರ್ವಹಣೆ ಇಲ್ಲದೆ ಸಾಂಸ್ಕೃತಿಕ ಭವನ ಪಾಳು ಬಿದ್ದು ಕುಡುಕರ ಮತ್ತು ಅಕ್ರಮ ಚಟುವಟಿಕೆ ಮಾಡುವವರ ಅಡ್ಡವಾಗಿತ್ತು. ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ಅವರು ಇನ್ನು 15 ದಿನಗಳಲ್ಲಿ ಸಾಂಸ್ಕೃತಿಕ ಭವನದ ಕಾಮಗಾರಿಯನ್ನು ಆರಂಭ ಮಾಡುತೇವೆಂದು ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

