Breaking News

ಆಲಮಟ್ಟಿ ಜಲಾಶಯವನ್ನು ಪೂರ್ವ ನಿಗದಿತ 524 ಮೀ. ಗೆ ಎತ್ತರಿಸಲು ರಾಜ್ಯ ಸರ್ಕಾರ ಬದ್ಧ: ಡಿಸಿಎಂ ಡಿಕೆ ಶಿವಕುಮಾರ್

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಆಲಮಟ್ಟಿ ಜಲಾಶಯವನ್ನು ಪೂರ್ವ ನಿಗದಿತ 524.256 ಮೀಟರ್ ಗೆ ಎತ್ತರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿಯೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ: ಸರ್ಕಾರಕ್ಕೆ ನಿತ್ಯ ₹1 ಕೋಟಿ ಬಡ್ಡಿ ಹೊರೆ!
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮುಳುಗಡೆ ಭೂಮಿಗೆ ನಿಗದಿಯಾದ ಪರಿಹಾರ ಕೊಡಲು ನಮ್ಮ ಸರ್ಕಾರದ ಅಭ್ಯಂತರವಿಲ್ಲ ಎಂದರು.
ಸೋಮುವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿಯವರು ಯುಕೆಪಿ ಸಂತ್ರಸ್ತರ ಮತ್ತು ಈ ಭಾಗದ ಪ್ರತಿನಿಧಿಗಳ ಸಭೆ ಕರೆದಿದ್ದಾರೆ.‌ ಆ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ, ತೀರ್ಮಾನಿಸುತ್ತೇವೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಅಂತಿಮ ತೀರ್ಪಿನ ಕುರಿತು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸದ ಹೊರತು ಸದ್ಯ ನಾವೇನು ಮಾಡಲು ಸಾಧ್ಯವಿಲ್ಲ ಎಂದರು.
ಗೆಜೆಟ್ ನೋಟಿಫಿಕೇಶನ್ ಆಗುವ ಮುನ್ನ ಕಾಮಗಾರಿ ಮಾಡಬೇಕಾ, ಬೇಡವಾ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ.‌ ಅದರ ಮಧ್ಯೆಯೂ ನಾವು ಪರ್ಯಾಯ ಏನೇನು ಮಾಡಬೇಕು ಎಂಬ ಚರ್ಚೆ ಮಾಡುತ್ತೇವೆ ಎಂದರು‌.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *