Breaking News

ವಿಜಯಪುರ: ₹5 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಸಚಿವ ಸತೀಶ ಜಾರಕಿಹೊಳಿ ಚಾಲನೆ

ವಿಜಯಪುರ: ಪಟ್ಟಣದ ಶಿವಗಣೇಶ ಸರ್ಕಲ್‌ನಿಂದ ಶಿಡ್ಲಘಟ್ಟ ಕ್ರಾಸ್‌ವರಗೆ ₹5 ಕೋಟಿ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭಾನುವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭೂಮಿ ಪೂಜೆ ಸಲ್ಲಿಸಿದರು.
ಪಟ್ಟಣದಲ್ಲಿ ಈಗಾಗಲೇ ಸುಮಾರು ₹9.5 ಕೋಟಿ ವೆಚ್ಚದಲ್ಲಿ ಕೋಲಾರ ಮುಖ್ಯರಸ್ತೆಯಲ್ಲಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈಗ ಶಿವಗಣೇಶ ಸರ್ಕಲ್ ನಿಂದ 480 ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ರಸ್ತೆ ಕಾಮಗಾರಿ ಗುಣಮಟ್ಟದಲ್ಲಿರುವಂತೆ ಗುತ್ತಿಗೆದಾರರು ಗಮನಹರಿಸಬೇಕು ಎಂದು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಗ್ರಾಮ ಪಂಚಾಯಿತಿಗೊಂದರಂತೆ ಮಾದರಿ ಶಾಲೆ ನಿರ್ಮಿಸಿ, ಇನ್ಫೋಸಿಸ್‌ ಸಹಭಾಗಿತ್ವದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಜಿ.ಪಂ.ಸಿ.ಇ.ಓ ಡಾ.ಅನುರಾಧ, ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ನಿರ್ದೇಶಕ ವಿ.ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್, ಮುಖಂಡ ರವೀಶ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಪುರಸಭೆ ಸದಸ್ಯರಾದ ಎಂ.ಸತೀಶ್ ಕುಮಾರ್, ಎ.ಆರ್.ಹನೀಪುಲ್ಲಾ, ಭವ್ಯಮಧು, ಸಿ.ಎಂ.ರಾಮು, ಎಂ.ನಾರಾಯಣಸ್ವಾಮಿ, ಶಿಲ್ಪಾಅಜಿತ್, ಎಂ.ರಾಜಣ್ಣ, ಸೈಯದ್ ಎಕ್ಭಾಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್. ಕೆ.ಆರ್.ನಾಗೇಶ್, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಮಂಡಿಬೆಲೆ ದೇವರಾಜಪ್ಪ, ಕೆ.ಎಂ.ಮಧುಮಹೇಶ್, ಧರ್ಮಪುರ ಕೃಷ್ಣಪ್ಪ, ಯಲುವಹಳ್ಳಿ ನಟರಾಜ್ ಇದ್ದರು.

Share News

About BigTv News

Check Also

ನಕಲಿ ಔಷಧ ಜಾಲ ಪತ್ತೆ : ಬೆಂಗಳೂರಿನ 5 ಕಡೆ ‘ED’ ದಾಳಿ : ಆರೋಪಿ ವೀರೇಶ್ ಬ್ಯಾಂಕ್ ಖಾತೆ ಫ್ರೀಜ್!

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ …

Leave a Reply

Your email address will not be published. Required fields are marked *