ಒಂದು ಕಡೆ ಮುರಿದು ಬಿದ್ದಿರುವ ಪೈಪುಗಳು , ಇನ್ನೊಂದೆಡೆ ಹಾರಿ ಹೋದ ಪಾಲಿ ಹೌಸ್ ಮೇಲ್ಚಾವಣಿ , ಲಕ್ಷಾಂತರ ರೂ ಸಾಲ ಮಾಡಿ ನಿರ್ಮಿಸಿದ ಪಾಲಿ ಹೌಸ್ ತನ್ನ ಕಣ್ಣು
ಮುಂದೆ ನಾಶವಾಗಿ ರೈತನ ಕಣ್ಣಲ್ಲಿ ನೀರು , ಈ ದೃಶ್ಯಗಳು ಕಂಡುಬಂದಿದ್ದು
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಎಂಬ ಗ್ರಾಮದಲ್ಲಿ.ಬೀಚಗೊಂಡಹಳ್ಳಿ ಗ್ರಾಮದ ನಿವಾಸಿ ಚಿಕ್ಕಮುನಿಯಪ್ಪನಿಹೆ ಸೇರಿದ ಪಾಲಿ ಹೌಸ್ , ಇಳಿ ವಯಸ್ಸಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಪ್ರಗತಿ ಕೃಷ್ಣ
ಬ್ಯಾಂಕ್ ನಲ್ಲಿ 38 ಲಕ್ಷ ಸಾಲ ಪಡೆದು ಬೆಳೆ ಬೆಳೆಯಲು ಸಿದ್ದ ಪಡಿಸಿದ್ದ ಪಾಲಿ ಹೌಸ್ ಈಗ
ನೆಲಸಮವಾಗಿದೆ .ನಿನ್ನೆ ಬಿರುಗಾಳಿ ಸಮೇತ ಸುರಿದ ಮಳೆಯಿಂದ ಪಾಲಿ ಹೌಸ್ ಸಂಪೂರ್ಣ ನಾಶವಾಗಿದೆ , ಇದರಿಂದ ಬ್ಯಾಂಕ್ ನಲ್ಲಿ ಪಡೆದ ಸಾಲ ತೀರಿಸಲು ದಾರಿ ಇಲ್ಲದೆ
ತಲೆ ಮೇಲೆ ಕೈ ಇಟ್ಟುಕೊಂಡು ಕೂರುವಂತಾಗಿದೆ , ಜೊತೆಗೆ ಹತ್ತು ಲಕ್ಷ ಕೈಸಾಲ ಮಾಡಿಕೊಂಡಿದ್ದಾನೆ , ಸಂಭಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ರೈತನಿಗೆ
ಸೂಕ್ತ ಪರಿಹಾರ ಕೊಡಿಸುವಂತೆ ರೈತ ಅಧಿಕಾರಿಗಳ ಮೊರೆ ಹೋಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





