Breaking News
Featured Video Play Icon

ಹುಬ್ಬಳ್ಳಿ: ಅಪರಾಧ ಪ್ರಕರಣದಲ್ಲಿ ಭಾಗಿಯಾದವರ ಪರೇಡ್ ನಡೆಸಿದ ಕಮಿಷನರ್ ಎನ್.ಶಶಿಕುಮಾರ್‌..

ಹುಬ್ಬಳ್ಳಿ: ಅವಳಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾದ ಕಾರಣ MOB ಗಳ ಪರೇಡ್ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್‌ ತಿಳಿಸಿದ್ದಾರೆ.ನಮ್ಮಲ್ಲಿ ಸ್ಥಳೀಯ, ಪರಸ್ಥಳೀಯ ಸೇರಿ 3600 MOB ಕಾರ್ಡ್ ಗಳಿವೆ. ಬಹಳ ವರ್ಷಗಳ ಹಿಂದೆ ಕಾರ್ಡ್ ಮಾಡಿದ್ದು ಕೆಲವರು ತಗೆಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎಲ್ಲ ತರಹದ ಅಫೆನ್ಸ್ ಮಾಡತೀದಾರೆ‌.

ಪ್ರತಿ ಠಾಣೆಯಲ್ಲಿ 50 ರಿಂದ 60 ಜನ MOB ಕಾರ್ಡ್ ಹೋಲ್ಡರ್ ಇದ್ದು, ಸುಮಾರು 930 ಜನ ಅವಳಿ ನಗರದಲ್ಲಿ MOB ಹೋಲ್ಡರ್ ಗಳು ಬಂದಿದ್ದಾರೆ. ನಿನ್ನೆ ರಾತ್ರಿಯಿಂದ MOB ಕಾರ್ಡ್ ಹೋಲ್ಡರ್ ಗಳನ್ನು ವಿಚಾರಣೆ ಮಾಡಿದ್ದೇವೆ. 70 ಜನ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸ್ವತ್ತಿನ ಅಪರಾಧ ಪ್ರಕರಣ ಕಡಿಮೆ ಮಾಡಬೇಕಾಗಿದ್ದು, ಕೆಲವರು ಮುಖ್ಯವಾಹಿಗೆ ಬರಬೇಕು ಹೀಗಾಗಿ ಅವಕಾಶ ಕೊಡಬೇಕಾಗಿದೆ. ಯಾರ ಮೇಲೆ ಬಹಳ ಕೇಸ್ ಇವೆ ಅವರನ್ನು ಗಡಿಪಾರು ಮಾಡಲಾಗವುದು ಎಂದರು.ನಿನ್ನೆ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಕೆನರಾ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣ ಕುರಿತು ಮಾತನಾಡಿದ ಅವರು, ಇದು ರಾಬರಿ, ಡಕಾಯಿತಿ ಅಲ್ಲ. ಈ ಹಿಂದೆ ಅದೇ ಬ್ಯಾಂಕ್ ಕಳ್ಳತನ ಮಾಡಲಾಗಿತ್ತು ಯಾವ ವಸ್ತುಗಳ ಕಳ್ಳತನವೂ ಆಗಿಲ್ಲ. ಕೆನರಾ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ‌ ಇದೀಗ ದೂರು ಕೊಟ್ಟಿದ್ದಾರೆ. ಬ್ಯಾಂಕ್ ಅವರ ಇನ್ವಾಲ್ವ ಮೆಂಟ್ ಆಗಿಲ್ಲ. ಅಫೆನ್ಸ್ ಆಗಿಲ್ಲ ಅನ್ನೋ ಕಾರಣಕ್ಕೆ ನಿರ್ಲಕ್ಷ್ಯ ಮಾಡಿದ್ದಾರೆ. ಅಫೆನ್ಸ್ ಆದ್ರೆ ಮಾತ್ರ ದೂರು ಕೊಡ್ತೀವಿ ಅನ್ನೋ ಮನೋಭಾವ ಹೋಗಬೇಕು. ಬ್ಯಾಂಕ್ ನಲ್ಲಿ ಯಾವ ಪ್ರಾಪರ್ಟಿಯೂ ಕಳ್ಳತನ ಆಗಿಲ್ಲ ಸಿಸಿಟಿವಿ ಫುಟೇಜ್ ಇದೆ. ಒಬ್ಬನೇ ಅಟೆಂಪ್ಟ್ ಮಾಡಿದ್ದಾನೆ ಆದರೆ ಸೆಕ್ಯುರಿಟಿ ಇರಲಿಲ್ಲ ಎಂದು ಕಮೀಷನರ್ ಎನ್.ಶಶಿಕುಮಾರ್‌ ತಿಳಿಸಿದ್ದಾರೆ.

Share News

About Shaikh BigTv

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *