Breaking News

ಬೆಂಬಲ ಬೆಲೆ ಯೋಜನೆಯಡಿ ರಾಯಚೂರು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳು ಆರಂಭ: ಜಿಲ್ಲಾಧಿಕಾರಿ

ರಾಯಚೂರು: 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಕಡಲೇಕಾಳು ಉತ್ಪನ್ನವನ್ನು ಖರೀದಿಸಲು ರಾಯಚೂರು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ 2024-25ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಮದ ಕಡಲೇಕಾಳು ಉತ್ಪನ್ನವನ್ನು ಪ್ರತಿ ಎಕರೆಗೆ 4.00 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ವರೆಗೆ ಖರೀದಿ ಪ್ರಮಾಣ ನಿಗಧಿಪಡಿಸಲಾಗಿದೆ.
ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್‍ಗೆ 5,650 ರೂ.ಗಳಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುವುದು. ಜನವರಿ 23 ರಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಿದೆ.
ರೈತರಿಂದ ಕಡಲೇಕಾಳನ್ನು ಖರೀದಿಸುವ ಸಂಬಂಧ ಖರೀದಿ ಕೇಂದ್ರಗಳನ್ನು ತೆರೆಯಾಲಾಗಿದ್ದು, ರೈತ ಬಾಂಧವರು ಫ್ರೂಟ್ಸ್ ಐ.ಡಿ ಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿ ಕಡಲೇಕಾಳು ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗಪಡಿಸಿಕೊಳ್ಳಲು ಜಿಲ್ಲೆಯ ರೈತ ಬಾಂಧವರಲ್ಲಿ ಕೋರಲಾಗಿದೆ.
ರೈತ ಬಾಂಧವರು ಆಧಾರ್ ಕಾರ್ಡ್, ಪಹಣಿಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿ ಕಡಲೇಕಾಳು ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಜಿಲ್ಲೇಯ ರೈತ ಬಾಂಧವರಲ್ಲಿ ಕೋರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ಧಾರೆ.
ರಾಯಚೂರು ತಾಲೂಕಿನ ಖರೀದಿ ಕೇಂದ್ರಗಳು: 1) ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಾಕರ ಸಂಘ.ನಿ., ರಾಯಚೂರು ನಗರ. ಮೊಬೈಲ್ ನಂ.9901473993. 2) ಪ್ರಾ.ಕೃ.ಪ.ಸ.ಸಂಘ.ನಿ., ಯರಗೇರಾ. ಮೊ.ನಂ.9663802434. 3) ಎಫ್.ಪಿ.ಒ (ಗೋನಾಳ ರೈತ ಉತ್ಪದಾಕರ ಕಂಪನಿ), ಗೋನಾಳ. ಮೊ.ನಂ. 9008079008. 4) ಎಫ್.ಪಿ.ಒ (ರಾಯಚೂರು) ಮಲ್ಲಾಪೂರ. ಮೊ.ನಂ.9611492709. 5) ಪ್ರಾ.ಕೃ.ಪ.ಸ.ಸಂಘ.ನಿ., ದೇವಸೂಗುರು. ಮೊನಂ.9880005759/8971903798. 6) ಪ್ರಾ.ಕೃ.ಪ.ಸ.ಸಂಘ.ನಿ, ಗಿಲ್ಲೆಸ್ಗೂರು. ಮೊ.ನಂ.9901492394. 7) ಪ್ರಾ.ಕೃ.ಪ.ಸ.ಸಂಘ.ನಿ, ಸುಲ್ತಾನಪೂರು. ಮೊ.ನಂ.8310542322. 8) ಪ್ರಾ.ಕೃ.ಪ.ಸ.ಸಂಘ.ನಿ., ಕಲ್ಮಲಾ. ಮೊ.ನಂ.9986118209. 9) ಓ.ಜಿ.ಸಿ.ಎಸ್., ಹುಣಸಿಹಾಳ್ ಹುಡಾ ಕ್ಯಾಂಪ್. ಮೊ.ನಂ.9743695467. 10) ಎಫ್.ಪಿ.ಒ ( ಮರಡಿ ಗಂಗಾಧರ ರೈತ ಉತ್ಪದಾಕರ ಕಂಪನಿ), ಜಾಗಿರ ವೆಂಕಟಪೂರ. ಮೊ.ನಂ.6360410635. 11) ಪ್ರಾ.ಕೃ.ಪ.ಸ.ಸಂಘ.ನಿ., ರಾಯಚೂರು. ಮೊ.ನಂ.6362058790.
ದೇವದುರ್ಗ ತಾಲೂಕಿನಲ್ಲಿ ಖರೀದಿ ಕೇಂದ್ರಗಳು: 1) ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಾಕರ ಸಂಘ.ನಿ., ದೇವದುರ್ಗ. ಮೊ.ನಂ.9741879316. 2) ಪ್ರಾ.ಕೃ.ಪ.ಸ.ಸಂಘ.ನಿ., ಜಾಲಹಳ್ಳಿ. ಮೊ.ನಂ.9008020972. 3) ಪ್ರಾ.ಕೃ.ಪ.ಸ.ಸಂಘ.ನಿ., ಅರಕೇರಾ. ಮೊ.ನಂ.9008504467. 4) ಎಫ್.ಪಿ.ಒ, ಮದರಕಲ್. ಮೊ.ನಂ.8904175493. 5) ದೇವದುರ್ಗ ಎಫ್.ಪಿ.ಒ, ಗಬ್ಬೂರು. ಮೊ.ನಂ.8431710456. 6) ಪ್ರಾ.ಕೃ.ಪ.ಸ.ಸಂಘ.ನಿ., ಮಸರಕಲ್. ಮೊ.ನಂ.9900772919.
ಮಾನವಿ ತಾಲೂಕಿನಲ್ಲಿ ಖರೀದಿ ಕೇಂದ್ರಗಳು: 1) ಟಿ.ಎ.ಪಿ.ಸಿ.ಎಂ.ಎಸ್, ಮಾನವಿ. ಮೊ.ನಂ.9845014825. 2) ಪ್ರಾ.ಕೃ.ಪ.ಸ.ಸಂಘ.ನಿ., ಕುರ್ಡಿ. ಮೊ.ನಂ.9900993648. 3) ಪ್ರಾ.ಕೃ.ಪ.ಸ.ಸಂಘ.ನಿ., ಬ್ಯಾಗವಾಟ. ಮೊ.ನಂ.9902943958. 4) ಎಫ್.ಪಿ.ಒ (ಮಾನವಿ ಫೇಡ್), ನೀರಮಾನ್ವಿ. ಮೊ.ನಂ.8904175493. 5) ಎಫ್.ಪಿ.ಒ(ಸುಬೀಕ್ಷ), ಪೆÇೀತ್ನಾಳ. ಮೊ.ನಂ.9880474005.
ಲಿಂಗಸೂಗುರು ತಾಲೂಕಿನಲ್ಲಿ ಖರೀದಿ ಕೇಂದ್ರಗಳು: 1) ಟಿ.ಎ.ಪಿ.ಸಿ.ಎಂ.ಎಸ್ , ಲಿಂಗಸುಗುರು. ಮೊ.ನಂ.9964851546. 2) ಪ್ರಾ.ಕೃ.ಪ.ಸ.ಸಂಘ.ನಿ., ಮುದಗಲ್. ಮೊ.ನಂ.9980681521. 3) ಪ್ರಾ.ಕೃ.ಪ.ಸ.ಸಂಘ.ನಿ.,ಗೆಜ್ಜಲಗಟ್ಟ. ಮೊ.ನಂ.9739253619. 4) ಪ್ರಾ.ಕೃ.ಪ.ಸ.ಸಂಘ.ನಿ., ಚಿಕ್ಕ ಹೆಸರೂರು. ಮೊ.ನಂ.9611360153. 5) ಪ್ರಾ.ಕೃ.ಪ.ಸ.ಸಂಘ.ನಿ., ಮಾವಿನ ಬಾವಿ. ಮೊ.ನಂ.9902814649. 6) ಪ್ರಾ.ಕೃ.ಪ.ಸ.ಸಂಘ.ನಿ., ಬಯ್ಯಾಪೂರು. ಮೊ.ನಂ. 9449710947. 7) ಪ್ರಾ.ಕೃ.ಪ.ಸ.ಸಂಘ.ನಿ., ಗೌಡೂರು. ಮೊ.ನಂ.9731335493. 8) ಪ್ರಾ.ಕೃ.ಪ.ಸ.ಸಂಘ.ನಿ., ನಾಗಲಪೂರು. ಮೊ.ನಂ.7259230182. 9) ಪ್ರಾ.ಕೃ.ಪ.ಸ.ಸಂಘ.ನಿ.,ಗುರುಗುಂಟಾ. ಮೊ.ನಂ.9972501671. 10) (ಶ್ರೀ ಕನಕಲಾಂಬ) ಎಫ್.ಪಿ.ಒ , ಗುಡದನಾಳ. ಮೊ.ನಂ.9731298951. 11) ಪ್ರಾ.ಕೃ.ಪ.ಸ.ಸಂಘ.ನಿ., ಕರಡಕಲ್. ಮೊ.ನಂ.9632103535. 12) ಮಾಕಾಪುರ್, ಪ್ರಾ.ಕೃ.ಪ.ಸ.ಸಂಘ.ನಿ., ಮೊ.ನಂ.9380120752. 13) ಎಫ್.ಪಿ.ಒ (ಅರೂಡ), ಸರ್ಜಾಪುರ, ಮೊ.ನಂ.9880668127.
ಮಸ್ಕಿ ತಾಲೂಕಿನಲ್ಲಿ ಖರೀದಿ ಕೇಂದ್ರಗಳು: 1) ಪ್ರಾ.ಕೃ.ಪ.ಸ.ಸಂಘ.ನಿ., ಮಸ್ಕಿ. ಮೊ.ನಂ.9986135108. 2) ಪ್ರಾ.ಕೃ.ಪ.ಸ.ಸಂಘ.ನಿ., ಮಟ್ಟೂರು. ಮೊ.ನಂ.7259482300. 3) ಪ್ರಾ.ಕೃ.ಪ.ಸ.ಸಂಘ.ನಿ., ಮೆದಿಕಿನಾಳ. ಮೊ.ನಂ.9164116935. 4) ಪ್ರಾ.ಕೃ.ಪ.ಸ.ಸಂಘ.ನಿ., ಗುಡದೂರು. ಮೊ.ನಂ.9448914106. 5) ಪ್ರಾ.ಕೃ.ಪ.ಸ.ಸಂಘ.ನಿ., ಪಮನಕಲ್ಲೂರು. ಮೊ.ನಂ.9731559317. 6) ಪ್ರಾ.ಕೃ.ಪ.ಸ.ಸಂಘ.ನಿ., ಸಂತೆಕಲ್ಲೂರು. ಮೊ.ನಂ.8123755868. 7) ದಿವ್ಯ ಜ್ಯೋತಿ ಎಫ್.ಪಿ.ಒ , ವಟಗಲ್. ಮೊ.ನಂ.9686838692. 8) ಬ್ರಹ್ಮ ಶ್ರೀ ಎಫ್.ಪಿ.ಒ , ಗುಂಢಾ. ಮೊ.ನಂ.9449064099. 9) ಕೃಷ್ಣ ತುಂಗಾ ಎಫ್.ಪಿ.ಒ, ಹುಲ್ಲೂರು. ಮೊ.ನಂ.8722474787.
ಸಿಂಧನೂರು ತಾಲೂಕಿನಲ್ಲಿ ಖರೀದಿ ಕೇಂದ್ರಗಳು: 1) ಟಿ.ಎ.ಪಿ.ಸಿ.ಎಂ.ಎಸ್, ಸಿಂಧನೂರು ಮೊ.ನಂ.9071004444. 2) ಪ್ರಾ.ಕೃ.ಪ.ಸ.ಸಂಘ.ನಿ., ಜವಳಗೇರಾ. ಮೊ.ನಂ.9742036608. 3) ಪ್ರಾ.ಕೃ.ಪ.ಸ.ಸಂಘ.ನಿ., ಬಳಗನೂರು. ಮೊ.ನಂ.7259992555. 4) ಚೌಡೇಶ್ವರಿ ಎಫ್.ಪಿ.ಒ, ತುರ್ವಿಹಾಳ. ಮೊ.ನಂ.9742366679. 5) ಪ್ರಾ.ಕೃ.ಪ.ಸ.ಸಂಘ.ನಿ., ಬಾದರ್ಲಿ. ಮೊ.ನಂ.9008555540. 6) ಧಾನ್ಯ ಎಫ್.ಪಿ.ಒ, ಕಲಮಂಗಿ. ಮೊ.ನಂ.8722880240. 7) ತಾಲೂಕು ಕೃಷಿ ಸಂಸ್ಕರಣ ಮತ್ತು ಮಾರಾಟ ಸಹಾಕರ ಸಂಘ ನಿ., ಅರಗಿನ ಮರ ಕ್ಯಾಂಪ್. ಮೊ.ನಂ.9972697653. 8) ಅಕ್ಷಯ ಎಫ್.ಪಿ.ಒ, ಹತ್ತಿಗುಡ್ಡ. ಮೊ.ನಂ.9741610266. 9) ಆರ್.ಹೆಚ್ ಕಾಲೋನಿ-4, ಎಫ್.ಪಿ.ಒ (ಬಗಳಾಂಬ)., ಮೊ.ನಂ.9972629333/9972122696.
ಸಿರವಾರ ತಾಲೂಕಿನಲ್ಲಿ ಖರೀದಿ ಕೇಂದ್ರಗಳು: 1) ಪ್ರಾ.ಕೃ.ಪ.ಸ.ಸಂಘ.ನಿ., ಸಿರವಾರ. ಮೊ.ನಂ.9972961199. 2) ಪ್ರಾ.ಕೃ.ಪ.ಸ.ಸಂಘ.ನಿ., ಕವಿತಾಳ. ಮೊ.ನಂ.7259842464. 3) ಪ್ರಾ.ಕೃ.ಪ.ಸ.ಸಂಘ.ನಿ., ಹಿರೆಹಣಗಿ. ಮೊ.ನಂ.9845809972. 4) ಪ್ರಾ.ಕೃ.ಪ.ಸ.ಸಂಘ.ನಿ., ಹರವಿ. ಮೊ.ನಂ.9739752256. 5) ಪ್ರಾ.ಕೃ.ಪ.ಸ.ಸಂಘ.ನಿ., ಕಲ್ಲೂರು. ಮೊ.ನಂ.6360823550. 6) ಪ್ರಾ.ಕೃ.ಪ.ಸ.ಸಂಘ.ನಿ., ಅತ್ತನೂರು. ಮೊ.ನಂ.9743125282. 7) ಪ್ರಾ.ಕೃ.ಪ.ಸ.ಸಂಘ.ನಿ., ನುಗುಡೋಣಿ ಹೊಸುರು. ಮೊ.ನಂ.9900991282.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *