ಬೆಂಗಳೂರು: ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳ ಅನುದಾನಕ್ಕೆ 22.47 ಕೋಟಿ ರೂ. ಬಿಡುಗಡೆ ಮಾಡಿ ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
1ರಿಂದ 30 ಮಕ್ಕಳಿರುವ ಪ್ರತೀ ಶಾಲೆಗೆ ತಲಾ 2 ಸಾವಿರ ರೂ., 31ರಿಂದ 100 ವಿದ್ಯಾರ್ಥಿಗಳಿರುವ ಶಾಲೆಗೆ 5 ಸಾವಿರ ರೂ., 101ರಿಂದ 250 ಶಾಲೆಗಳಿರುವ ಶಾಲೆಗೆ 10 ಸಾವಿರ ರೂ., 251ರಿಂದ 1,000 ವಿದ್ಯಾರ್ಥಿಗಳಿರುವ ಶಾಲೆಗೆ 15 ಸಾವಿರ ರೂ.ಮತ್ತು ಸಾವಿರಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗೆ ತಲಾ 20 ಸಾವಿರ ರೂ.ಗಳಂತೆ ನಿಗದಿ ಮಾಡಲಾಗಿದೆ.
ಈ ಅನುದಾನವನ್ನು ಕಚೇರಿಯ ದಾಖಲೆ ಪುಸ್ತಕ, ತರಗತಿಗೆ ಅಗತ್ಯವಿರುವ ಅಂಕಪಟ್ಟಿ, ಬೋಧನಾ ಉಪಕರಣಗಳ ತಯಾರಿ, ಬೋಧನಾ ಉಪಕರಣಗಳ ಖರೀದಿ, ಕಟ್ಟಡದ ಸಣ್ಣಪುಟ್ಟ ದುರಸ್ತಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪೀಠೊಪಕರಣಗಳ ದುರಸ್ತಿ, ಕ್ರೀಡಾ ಸಾಮಗ್ರಿ ಖರೀದಿ, ವಿದ್ಯುತ್ / ದೂರವಾಣಿ ಬಿಲ್ ಪಾವತಿ, ದಿನಪತ್ರಿಕೆ ಮತ್ತು ವಾರಪತ್ರಿಕೆ ವೆಚ್ಚ, ಶಾಲಾ ಸ್ವತ್ಛತೆ ವೆಚ್ಚಗಳಿಗೆ ಮಾತ್ರ ಬಳಸಬೇಕು. ಶಾಲಾನುದಾನದ ಶೇ. 10 ಮೊತ್ತವನ್ನು ಸ್ವತ್ಛತಾ ಕಾರ್ಯಚಟುವಟಿಕೆಗಳಿಗೆ ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದು ಯೋಜನಾ ನಿರ್ದೇಶಕ ಕೂರ್ಮಾ ರಾವ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

