9 ತಿಂಗಳ ಹಿಂದೆ ಬಹಳ ಕಷ್ಟದಲ್ಲಿ ಸಿಲುಕಿರೋ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ವಾಪಸ್ ಕರೆದುಕೊಂಡು ಬರಲು ಡ್ರ್ಯಾಗನ್ ನೌಕೆಯನ್ನು ಕಳುಹಿಸಲಾಗಿದ.ಒಂಬತ್ತು ತಿಂಗಳ ಸುಧೀರ್ಘ ಪಯಣದ ಬಳಿಕ ಅಂತರಿಕ್ಷ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಕೊನೆಗೂ ಭೂಮಿಗೆ ಸುರಕ್ಷಿತವಾಗಿ ಮರಳಲಿದ್ದಾರೆ.ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಸುನಿತಾ ಆನಂದಭಾಷ್ಪ ಸುರಿಸುತ್ತಾ ಸಂತಸ ಪಟ್ಟಿದ್ದಾರೆ. ಇವರಿಬ್ಬರೂ ಕೃಶ ದೇಹಿಗಳಾಗಿರುವುದು ಹಾಗೂ ಬಾಹ್ಯಾಕಾಶದಲ್ಲೇ ರೋಗಕ್ಕೊಳಗಾಗಿ ಸಾವನ್ನಪ್ಪುವ ಆತಂಕದಲ್ಲಿ ನಾಸಾ ಹಗಲಿರುಳು ಇವರನ್ನು ರಕ್ಷಿಸಲು ಶ್ರಮಿಸುತ್ತಿತ್ತು.
ನಮ್ಮ ಗೆಳೆಯರನ್ನು ಮತ್ತೆ ಕಾಣಲು ಸಂತಸವಾಗುತ್ತಿದೆ. ಇದೊಂದು ಅದ್ಭುತವಾದ ದಿನ ಎಂದು ಸುನಿತಾ ಪ್ರತಿಕ್ರಿಯೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

