Breaking News

ಕಸ ಹಾಕಲು ಹೋದವರು ವಿದ್ಯುತ್ ತಂತಿ ತಗಲಿ ಸಾವು!

ಒಂದೇ ದಿನ ಇಬ್ಬರು ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನಾಗನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ, ನಾಗನಾಯಕನಹಳ್ಳಿ ಗ್ರಾಮದ ನಾಗರಾಜು ಮತ್ತೊಬ್ಬ ರೈತ ಮುನಿವೆಂಟಪ್ಪ ಮೃತಪಟ್ಟ ದುರ್ದೈವಿಗಳು… ನೆನ್ನೆ ಕೆಎಸ್‌ಆರ್ಟಿಸಿ ಇಲಾಖೆಯ ಲ್ಲಿ ಕೆಲಸ ಮಾಡುತ್ತಿದ್ದ ಡ್ರೈವರ್ ನಾಗರಾಜು ಎಂಬಾತ ಅನಾರೋಗ್ಯದ ಹಿನ್ನೆಲೆಯಲ್ಲಿ ಚಂದಾಪುರದಲ್ಲಿ ಮೃತಪಟ್ಟಿದ್ದರು, ಮೃತ ನಾಗರಾಜನನ್ನು ಅಂತ್ಯಸಂಸ್ಕಾರಕ್ಕಾಗಿ ಚಂದಾಪುರದಿಂದ ನಾಗನಾಯಕನಹಳ್ಳಿಗೆ ಕರೆ ತರಲಾಗಿತ್ತು.. ರಾತ್ರಿ ಮೃತ ನಾಗರಾಜ್ ಮನೆಯಲ್ಲಿ ಭಜನೆ ಸಹ ಮಾಡಲಾಗಿತ್ತು ಆ ಮನೆಯಲ್ಲಿ ಮೃತ ಮುನಿ ವೆಂಕಟಪ್ಪ ಭಜನೆಯಲ್ಲಿ ಭಾಗಿಯಾಗಿ ಕುಟುಂಬಸ್ಥರು ಜೊತೆಗೆ ಮಾತುಕತೆ ಮಾಡಿ ಮನೆಗೆ ಬಂದಿದ್ದರು . ಇನ್ನು ಮುನಿವೆಂಟಪ್ಪ ಎಂದಿನಂತೆ ಬೆಳಗಿನ ಜಾವ ಐದು ಗಂಟೆಗೆ ಕಸ ಹಾಕಲು ತೋಟಕ್ಕೆ ಹೋಗಿದ್ದರು ,ರಾತ್ರಿ ಮಳೆ ಸುರಿದಿತ್ತು ಆದರೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಕೆಳಗೆ ಬಿದ್ದಿದೆ ಅಗ್ಗ ಅಂತ ಅದನ್ನ ಎತ್ತಿ ಪಕ್ಕಕ್ಕೋದಿಕ್ಕೆ ಹೋಗಿದ್ದಾರೆ ಆದರೆ ಆ ವಿದ್ಯುತ್ ಬೇಲಿಗೆ ಸಿಕ್ಕಿ ಸ್ಥಳದಲ್ಲಿ ಆತರಾಗಿದ್ದಾರೆ. ಒಟ್ನಲ್ಲಿ ಸಾವಿಗೆ ಸಾವಿರಾರು ದಾರಿ ಸಾವು ಹೇಗ್ ಬರುತ್ತೆ ಅನ್ನೋದು ಗೊತ್ತಿಲ್ಲ ಆದರೆ ಬದುಕಿ ಬಾಳಬೇಕಾಗಿದ್ದ ರೈತ ಮಸಣ ಸೇರಿರೋದು ಮಾತ್ರ ವಿಪರ್ಯಾಸವೇ ಸರಿ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *