ಮೊದಲೇ ಈ ಕೆಲಸ ಆಗಬೇಕಿತ್ತು. ಕಳೆದ 10 ವರ್ಷಗಳಿಂದ ಪಕ್ಷವನ್ನು, ನಾಯಕರನ್ನು ಸುಸ್ತು ಮಾಡಿ, ಮುಜುಗರನ್ನು ಈಡುಮಾಡಿದ್ದರು. ಅವರ ಉಚ್ಚಾಟನೆಯಿಂದ ಪಕ್ಷಕ್ಕೆ ಯಾವುದೇ ಹಾನಿಯಾಗದು’ ಎಂದು ಹೇಳಿದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆಯನ್ನು ಸ್ವಾಗತಿಸಿ, ಅವರ ಸ್ವಕ್ಷೇತ್ರ ವಿಜಯಪುರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಸಿದ್ದೇಶ್ವರ ಗುಡಿ ಸೇರಿದಂತೆ ವಿವಿಧೆಡೆ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆ ಕೂಗಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

