Breaking News
Oplus_131072

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೇರಿಯಾಗಿದೆ.

ಬೆಂಗಳೂರು ಕಡೆಯಿಂದ ರಾಂಪುರ ಕಡೆ ತೆರಳುತ್ತಿದ್ದ ಕಾರ್ ಪಲ್ಟಿಯಾಗಿದೆ. ಪಕ್ಕದ ಹೈವೇಗೆ ಬಿದ್ದು, ಸರ್ವೀಸ್ ರಸ್ತೆಗೆ ಕಾರು ಉರುಳಿಬಿದ್ದಿದೆ. ಹೆದ್ದಾರಿಯಲ್ಲಿ ಕಾರ್ ಭೀಕರವಾಗಿ ಪಲ್ಟಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಾರು ಚಲಾಯಿಸುತ್ತಿದ್ದ ಮೌಲಾ ಅಬ್ದುಲ್ ಮತ್ತು ಅವರ ಇಬ್ಬರು ಪುತ್ರರಾದ ರೆಹಮಾನ್ ಮತ್ತು ಸಮೀರ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೌಲಾ ಅವರ ಪತ್ನಿ ಸಲೀಮಾ ಬೇಗಂ, ಅವರ ತಾಯಿ ಫಾತಿಮಾ ಮತ್ತು ಮತ್ತೊಬ್ಬ ಪುತ್ರ ಹುಸೇನ್ ಗಂಭೀರ ಗಾಯಗೊಂಡಿದ್ದಾರೆ. ಪೊಲೀಸರು ಅವರನ್ನು ಬಳ್ಳಾರಿ ವಿಐಎಂಎಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬೊಮ್ಮಕ್ಕನಹಳ್ಳಿ ಮಜೀದ್ ಬಳಿ ಚಳ್ಳಕೆರೆ ಮತ್ತು ಬಳ್ಳಾರಿ ನಡುವಿನ ರಾಷ್ಟ್ರೀಯ ಹೆದ್ದಾರಿ-150A ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *