ಪಟ್ಟಣದ ಸಾರಿಗೆ ಘಟಕದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ದುಲ್ ಶಿರೂರು ವಿಷ ಸೇವಿಸಿದ್ದು, ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಡ್ಯೂಟಿ ಸಂದರ್ಭದಲ್ಲಿ ಕೆಎಂಪಿಎಲ್ ತರುವಂತೆ ಹಾಗೂ ಹೈದರಾಬಾದ್ ತಲುಪಿದ ನಂತರ ಡೇ ಡ್ಯೂಟಿ ಸೇರಿದಂತೆ ಹಲವು ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಹೀಗಿದ್ದರೂ ಇಷ್ಟು ದಿನ ಸಹಿಸಿಕೊಂಡಿದ್ದೆ. ಇಂದು ರಾತ್ರಿ ಹೈದರಾಬಾದ್‌ಗೆ ಹೋಗಿ ಬೆಳಿಗ್ಗೆ ವಾಪಸ್ ಬರುವಂತೆ ಹೇಳಿದರು. ವಿಶ್ರಾಂತಿ ಇಲ್ಲದೇ ಡ್ಯೂಟಿ ಮಾಡಲು ನನ್ನಿಂದ ಆಗಲ್ಲ ಎಂದಾಗ ಅಮಾನತು ಮಾಡುವುದಾಗಿ ಬೆದರಿಸಿದರು. ಇದರಿಂದ ನೊಂದು ಕ್ರಿಮಿನಾಶಕ ಸೇವಿಸಿದ್ದೇನೆ. ವ್ಯವಸ್ಥಾಪಕರನ್ನು ಅಮಾನತು ಮಾಡಬೇಕು. ಉಳಿದ ಚಾಲಕರು ನೆಮ್ಮದಿಯಿಂದ ಕೆಲಸ ಮಾಡುವಂತಾಗಬೇಕು’ ಎಂದು ಚಾಲಕ ಅಬ್ದುಲ್ ಶಿರೂರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

