Breaking News
Oplus_131072

ಚಾಮರಾಜನಗರ :ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ, 20ಕ್ಕೂ ಹೆಚ್ಚು ಜನ ಗಾಯ!

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಜರುಗಿದೆ.ರಾಜ್ಯದ ನಾನಾ ಕಡೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಾಪಸ್ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ತಾಳುಬೆಟ್ಟ ಮಹದೆಶ್ವರಬೆಟ್ಟ ಮಾರ್ಗ ಸಮೀಪ ಪಲ್ಟಿಯಾಗಿದೆ. ತಕ್ಷಣ ದಾರಿ ಹೋಕರು ತುರ್ತು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಘಟನೆ ನಡೆದ ಹಲವು ಅರ್ಧ ತಾಸುಗಳು ಆಂಬುಲೇನ್ಸ್ ಸಿಗದೆ ಪರದಾಡಿದ್ದಾರೆ ಬಳಿಕ ಪ್ರಾಧಿಕಾರದ ಆಂಬುಲೇನ್ಸ್ ಸೇರಿ ಖಾಸಗಿ ವಾಹನ ದ ಮುಖಾಂತರ ಮಹದೇಶ್ವರಬೆಟ್ಟ ಕೊಳ್ಳೇಗಾಲ ಆಸ್ಪತ್ರೆ ಗೆ ಚಿಕಿತ್ಸೆ ರವಾನಿಸಿಲಾಗಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *