ಬಿ.ಸಿ.ರೋಡಿನ ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ಗಂಡಸಿನ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿಯ ವಯಸ್ಸು 40ರಿಂದ 45 ಎಂದು ಅಂದಾಜಿಸಲಾಗಿದ್ದು, ಆತ ಮೃತಪಟ್ಟು ಒಂದೆರಡು ದಿನಗಳಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವುದಾದರೂ ವ್ಯಕ್ತಿ ಕಾಣೆಯಾಗಿ ಪತ್ತೆಯಾಗದೇ ಇದ್ದರೆ ಬಂಟ್ವಾಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮೃತದೇಹದ ಪತ್ತೆಗೆ ಸಹಕರಿಸುವಂತೆ ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

