Breaking News

ಪಾಕಿಸ್ತಾದಲ್ಲಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸುರಕ್ಷಿತ ಸ್ಥಳಕ್ಕೆ ಪರಾರಿ!

ಪಹಾಲ್ಗಾಮ್‌ ನರಮೇಧಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಹಿಂದೆಂದೂ ಕಾಣದ ರೀತಿಯಲ್ಲಿ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಿರುವ ಬೆನ್ನಲ್ಲೇ, ಮ್ಟೆ‌ ವಾಂಟೆಂಡ್‌ ಪಾತಾಕಿ ದಾವೂದ್‌ ಇಬ್ರಾಹಿಂ ತನ್ನ ಸ್ವಸ್ಥಾನದಿಂದ ಸುರಕ್ಷಿತ ಸ್ಥಳಕ್ಕೆ ಕಾಲ್ಕಿತ್ತಿದ್ದಾನೆ.ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಭೀತಿ ಉಂಟಾಗಿದ್ದು, ಭಾರತದ ಮ್ಟೆ‌ ವಾಂಟೆಡ್‌ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಪಾಕಿಸ್ತಾನದಿಂದ ಪಲಾಯನ ಮಾಡಿದ್ದಾನೆ. ಅನೇಕ ವರ್ಷಗಳಿಂದ ಪಾಕಿಸ್ತಾನದ ಕರಾಚಿ ನಗರದಲ್ಲಿ ದಾವೂದ್‌ ಇಬ್ರಾಹಿಂ, ಅವನ ವಿಶೇಷ ಸಹಾಯಕರಾದ ಚೋಟಾ ಶಕೀಲ್‌ ಮತ್ತು ಮುನ್ನಾ ಜಿಂಗ್ರಾರನ್ನು ಪಾಕ್‌ ಅಡಗಿಸಿಟ್ಟಿದೆ.ಭಾರತೀಯ ಸೇನೆಯು ಲಾಹೋರ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಯನ್ನು ಸಹ ನಾಶಪಡಿಸಿತು. ಇಸ್ಲಮಾಬಾದ್‌ ಮತ್ತು ಕರಾಚಿಯಲ್ಲೂ ಭಾರತ ದಾಳಿ ನಡೆಸಿದೆ. ಹೀಗಾಗಿ, ಭಯಗೊಂಡಿರುವ ದಾವೂದ್‌ ಇಬ್ರಾಹಿಂ ಕರಾಚಿ ಬಿಟ್ಟು ಬೇರೆ ಜಾಗಕ್ಕೆ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *