ಹುಬ್ಬಳ್ಳಿ ತಾಂಡಾಗಳಲ್ಲಿ ನಡೆಯುತ್ತಿರುವ ಪರಿಶಿಷ್ಠ ಜಾತಿಯ ಒಳಮೀಸಲಾತಿ ಸಮೀಕ್ಷೆ ಹಾಗು ಜಾತಿಗಣತಿಯಲ್ಲಿ ನಡೆದಿರುವ ತಾರತಮ್ಯ ದೊರಣೇಯನ್ನೂ ಹಾಗು ಗೊಂದಲಗಳನ್ನು ಬಗೆಹರಿಸುವ ಕುರಿತು ಮತ್ತು ಜಾತಿ ಗಣತಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡುವ ಕುರಿತು.ನ್ಯಾಯಮೂರ್ತಿಗಳು ನಾಗಮೋಹನದಾಸ ಇವರ ವರದಿ ಆದರಿಸಿ ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಉಪವರ್ಗೀಕರಣ (ಒಳಮಿಸಲಾತಿ) ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯಾಧ್ಯಂತ ಪರಿಶಿಷ್ಟ ಜಾತಿಯಲ್ಲಿರುವ ಕುಟುಂಬಗಳ ಜಾತಿ ಜನಗಣತಿ ಹಾಗು ಸದರಿ ಜಾತಿಯ ಕುಟುಂಬಗಳು ಈವರೆಗೆ ಮೀಸಲಾತಿಯಡಿಯಲ್ಲಿ ಪಡೆದಿರುವ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ಸೌಲಭ್ಯಗಳ ಸಮೀಕ್ಷೆ ಮಾಡುತ್ತಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ ರಾಜ್ಯ ಅಧ್ಯಕ್ಷ ಪಾಂಡುರಂಗ ಪಮ್ಮಾರ ಮಾತನಾಡಿ ಆಗ್ರಹಿಸಿದರು. ಬಹುತೇಕ ತಾಂಡಾಗಳಲ್ಲಿ ಸಮೀಕ್ಷೆದಾರರು ತಾಂಡಾದ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಸಮೀಕ್ಷೆದಾರರೆ ಖುದ್ದಾಗಿ ಆದಿ ಕರ್ನಾಟಕ ಆದಿ ಆಂದ್ರ ಅಂತ ತಾವು ಕೂಡ ಬರೆಸಬಹುದು ಎಂದು ಹೇಳುತ್ತಿದ್ದಾರೆ. ಕೆಲವು ತಾಂಡಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಖುದ್ದಾಗಿ ತಾಂಡಾದ ಸಂಪೂರ್ಣ ಜನಸಂಖ್ಯೆಯ ವಿವರ ಬರೆಸುತ್ತಿರುವುದು ಆಶಾದಾಯಕ.ಹೀಗೆ ಹಲವು ಕಾರ್ಯಗಳನ್ನು ಸರ್ಕಾರ ಮಾಡುವುದು ಅತ್ಯವಶ್ಯಕ ಇದೆ ಆದರೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೆ ದತ್ತಾoಶ ಸಂಗ್ರಹಣೆಗೆ ಇಳಿದಿರುವುದು ಮಾತ್ರ ದುರಂತ.ಹಾಗಾಗಿ ಸಮಾಜದ ಎಲ್ಲ ಬಂದುಗಳು ಒಕ್ಕೋರಲಿನಿಂದ ಈ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸುವ ಹಾಗೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ…ಎಂದು ಈ ಮೂಲಕ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಮತ್ತು ಹೆಚ್.ಎನ್.ನಾಗಮೋಹನ್ ದಾಸ್, ನ್ಯಾಯಮೂರ್ತಿಗಳು, ಒಳಮೀಸಲಾತಿ ಏಕ್ ಸದಸ್ಯ ವಿಚಾರಣಾ ಆಯೋಗ, ಬೆಂಗಳೂರು ಇವರಿಗೆ ಕರ್ನಾಟಕ ಬಂಜಾರಾ ಸಮುದಾಯದ ಹಿತದೃಷ್ಟಿಯಿಂದ ಕಳಕಳಿಯಿಂದ ವಿನಂತಿಯೊಂದಿಗೆ ಕೇಳಿಕೊಳ್ಳುತ್ತೇವೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಮಂಗಲಪ್ಪ ಲಮಾಣಿ,ಬಂಜಾರಾ ಹಕ್ಕು ಹೋರಾಟ ಸಮಿತಿ ಧಾರವಾಡ ಜಿಲ್ಲೆಯ ನಿರ್ದೇಶಕರಾದ ವೆಂಕಟೇಶ ಪಮ್ಮಾರ ,ಉಮೇಶ ಲಮಾಣಿ,ಭೀಮಣ್ಣ ರಜಪೂತ ,ಅರ್ಜುನ ಲಮಾಣಿ ,ಸಕೃ ಲಮಾಣಿ ,ಲಾಲು ಲಮಾಣಿ ಹಾಗೂ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

