Breaking News

ದೆಹಲಿ: ಉಗ್ರ ದಾಳಿಯ ಸಂಚು ವಿಫಲ, ಇಬ್ಬರ ಬಂಧನ!

ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿ ನಡೆಸುವ ಐಎಸ್‌ಐ ಸಂಚನ್ನು ಭಾರತದ ಗುಪ್ತಚರ ಏಜೆನ್ಸಿಗಳು ವಿಫಲಗೊಳಿಸಿವೆ. ಮೂರು ತಿಂಗಳ ಯೋಜಿತ ಕಾರ್ಯಾಚರಣೆಯಲ್ಲಿ ಐಎಸ್‌ಐ ಯತ್ನವನ್ನು ವಿಫಲಗೊಳಿಸಿ, ದಾಳಿ ನಡೆಸಲು ತೀವ್ರ ತರಬೇತಿ ಪಡೆದ ಇಬ್ಬರನ್ನು ಬಂಧಿಸಲಾಗಿದೆ.ದಾಳಿ ನಡೆಸುವ ಹೊಣೆ ಹೊತ್ತಿದ್ದ ಪಾಕಿಸ್ತಾನದ ಅನ್ಸಾರುಲ್ ಮಿಯಾ ಅನ್ಸಾರಿ ಕೂಡಾ ಬಂಧಿತರಲ್ಲಿ ಸೇರಿದ್ದಾನೆ. ಈತ ಭಾರತ ಸಶಸ್ತ್ರ ಪಡೆಗಳ ಬಗ್ಗೆ ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕುತ್ತಿದ್ದ ಎನ್ನಲಾಗಿದೆ.ರಾಂಚಿ ನಿವಾಸಿ ಅಖ್ಲಾಕ್ ಆಝಮ್ ಎಂಬಾತ ಕೂಡಾ ಇದರಲ್ಲಿ ಷಾಮೀಲಾಗಿರುವುದು ತನಿಖೆಯಿಂದ ಅನಾವರಣಗೊಂಡಿತ್ತು. ಇಬ್ಬರೂ ಪಾಕಿಸ್ತಾನದ ವ್ಯಕ್ತಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು. ಆಝಮ್ ನನ್ನು ಮಾರ್ಚ್ನಲ್ಲಿ ಬಂಧಿಸಲಾಗಿತ್ತು. ಇವರ ಮೊಬೈಲ್ ಸಾಧನಗಳ ವಿಶ್ಲೇಷಣೆಯಿಂದ ಇಡೀ ಸಂಚು ಬಹಿರಂಗಗೊಂಡಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *