ಇಲ್ಲೊಂದು ಮಂಗ ನೇರವಾಗಿ ಪಶು ಆಸ್ಪತ್ರೆಗೆ ಹೋಗಿದೆ. ತನಗಾದ ಸಮಸ್ಯೆಯನ್ನು ವೈದ್ಯರಿಗೆ ತಾನೆ ಸನ್ನೆ ಮೂಲಕ ತೋರಿಸಿದೆ. ಬಳಿಕ ಚಿಕಿತ್ಸೆ ಪಡೆದುಕೊಂಡು ಹೋಗಿದೆ.ತನ್ನ ಗುದದ್ವಾರದ ಬಳಿ ಗಾಯವಾಗಿ, ತೀವ್ರ ನೋವಿನಿಂದ ಬಳಲುತ್ತಿದ್ದ ಕೋತಿಯೊಂದಕ್ಕೆ ತನ್ನ ನೋವಿಗೆ ಪರಿಹಾರ ಕಂಡುಕೊಂಡು ತಾನೆ ಚಿಕಿತ್ಸೆಗಾಗಿ ಪಶು ಆಸ್ಪತ್ರೆ ಬಳಿ ಬಂದಿದೆ. ಇದನ್ನು ಗಮನಿಸಿದ ಸಿಬ್ಬಂದಿ ವೈದ್ಯರನ್ನು ಕರೆದಿದ್ದಾರೆ. ಸ್ಥಳದಲ್ಲೇ ಇದ್ದ ಪಶುವೈದ್ಯಕೀಯ ಪರಿವೀಕ್ಷಕ ಜಿ.ಜಿ.ಬಿಲ್ಲೊರ ತಪಾಸಣೆ ಮಾಡುವಾಗ ಕೋತಿ ತನಗಾದ ಗಾಯದ ಬಗ್ಗೆ ತಾನೆ ತೋರಿಸಿದೆ. ಬಳಿಕ ಚಿಕಿತ್ಸೆ ನೀಡಲಾಗಿದೆ. ಮೂಕ ಪ್ರಾಣಿಯಾದರೂ ಈ ಮಂಗ ಯಾವ ಮನಷ್ಯನಿಗೂ ಕಮ್ಮಿ ಇಲ್ಲದಂತೆ ಬುದ್ದಿವಂತಿಕೆ ತೋರಿಸಿದೆ.ಆಸ್ಪತ್ರೆ ಬಳಿ ಇದ್ದ ಬೈಕ್ ಮೇಲೆ ಮಲಗಿ ಕೈ ಸನ್ನೆ ಮೂಲಕ ತನ್ನ ನೋವಿನ ವೇದನೆಯನ್ನು ಕೋತಿ ತೋಡಿಕೊಂಡಿದೆ. ಆಗ ವೈದ್ಯ ಕೋತಿ ನೋವು ಅರ್ಥೈಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಅಚ್ಚರಿಗೆ ಕಾರಣವಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

