ಪ್ರಕಾಶಂ ಜಿಲ್ಲೆಯ ಕೊಮರೋಲು ಮಂಡಲದ ಥಾಟಿಚೆರ್ಲಾ ಮೋಟು ಬಳಿ ಸಂಜೆ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ನಂದ್ಯಾಲ್ ಜಿಲ್ಲೆಯ ಮಹಾನಂದಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಎಂಟು ಪ್ರಯಾಣಿಕರು ಪ್ರಕಾಶಂ ಮತ್ತು ಗುಂಟೂರು ಜಿಲ್ಲೆಗಳ ನಡುವೆ ಇರುವ ಬಾಪಟ್ಲಾದ ಸ್ಟುವರ್ಟ್ಪುರಂ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತರನ್ನು ಐವರನ್ನು ಗಜ್ಜಲ ಅಂಕಲು (50), ಗಜ್ಜಲ ಜನಾರ್ಧನ್, ಗಜ್ಜಲ ಭವಾನಿ (20), ಗಜ್ಜಲ ನರಸಿಂಹ (20) ಮತ್ತು ಸನ್ನಿ ಎಂದು ಗುರುತಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

