ಅಯ್ಯನಬಾವಿ ಗ್ರಾಮದಲ್ಲಿ ಶನಿವಾರ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ, ತೀವ್ರವಾಗಿ ಗಾಯಗೊಂಡಿದ್ದ 6 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.ಮಹಲಿಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ಮಗಳು ನವ್ಯಾ ಮೃತ ಬಾಲಕಿ.ತಲೆ ಹಾಗೂ ಹೊಟ್ಟೆಯ ಭಾಗವನ್ನು ಕಚ್ಚಿ ಎಳೆದಾಡಿವೆ. ಮುಖ ಹಾಗೂ ಕೈ ಕಾಲು, ತೊಡೆ ಭಾಗವನ್ನು ಕಿತ್ತು ಹಾಕಿವೆ.ರಕ್ತದ ಮಡುವಿನಲ್ಲಿ ಚೀರಾಡುತ್ತಿದ್ದ ಬಾಲಕಿಯನ್ನು ಕಂಡ ಸಾರ್ವಜನಿಕರು ನಾಯಿಗಳನ್ನು ಓಡಿಸಿ, ಆಕೆಯನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾಳೆ
bigtvnews | Hubli Dharwad News | Kannada News | Karnataka News Hubli News | News In Hubli | Local news

