ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿದ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಹಾಸನದ ಭೂಮಿಕ್ ಕೂಡ ಒಬ್ಬರು. ಇನ್ನೂ ಇಂಜಿನಿಯರಿಂಗ್ ಓದುತ್ತಿದ್ದ ಭೂಮಿಕ್, ಮನೆಯಲ್ಲಿ ಯಾರಿಗೂ ಹೇಳದೆ ಆರ್‌ಸಿಬಿ ಸಂಭ್ರಮಾಚರಣೆಗೆ ಬಂದಿದ್ದರು.ರಾತ್ರಿ ಹಗಲು ಎನ್ನದೆ ಅವನಿಗಾಗಿ ಕೋಟಿ ಕೋಟಿ ಹಣ ಮಾಡಿಟ್ಟೆ, ಹತ್ತಾರು ಜನಕ್ಕೆ ಅನ್ನ ಹಾಕುತ್ತಿದ್ದೆ. ನೂರು ಕೋಟಿ ರೂಪಾಯಿ ಆಸ್ತಿ ಮಾಡಿದ್ದೀನಿ. ಆದ್ರೆ ಅವನು ಹೊತ್ಕೊಂಡು ಹೋದ್ನಾ? ಅವನಿಗೆ ಸ್ವರ್ಗವೇ ಇಲ್ಲಿತ್ತು, ಅವನು ಹೇಗಿದ್ದನೋ ಹಾಗೆಯೇ ಕಳಿಸಿಕೊಡ್ತೀನಿ, ನನ್ನ ಸಲಹೆಗಳನ್ನು ಅವನೂ ತೆಗೆದುಕೊಳ್ತಿರಲಿಲ್ಲ, ಈಗ ನಾನು ಕೂಡ ಯಾರ ಸಲಹೆಯನ್ನೂ ತೆಗೆದುಕೊಳ್ಳಲ್ಲ ಎಂದು ಅಂತ್ಯಕ್ರಿಯೆ ವೇಳೆ ಭೂಮಿಕ್ ತಂದೆ ಕಣ್ಣೀರಿಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

